ನಿರಾಶ್ರಿತ ಮಹಿಳೆಯನ್ನ ಜಿಲ್ಲಾಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಪೃಥ್ವಿ ಸಿಂಗ್

ಬೆಳಗಾವಿ : ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರತ್ನಾ ರುದ್ರಗೌಡ ಪಾಟೀಲ್ ಎಂಬುವವರು ಖಾನಾಪೂರದಲ್ಲಿ ವಾಸವಾಗಿದ್ದರು ಯಾವುದೊ ಒಂದು ಮನೆಯಲ್ಲಿ ವಾಸವಾಗಿದ್ದುಕೊಂಡು ಹೋಟೆಲಗಳಲ್ಲಿ ಬೇಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು ಇದನ್ನ ಗಮನಿಸಿದ ಪೃಥ್ವಿ ಸಿಂಗ್ ಫೌಂಡೇಶನ್‌ನ ಮುಖ್ಯಸ್ಥ ಪೃಥ್ವಿ ಸಿಂಗ್ ಹಾಗೂ ಪೇಸ್ಬುಕ್ ಪ್ರೇಂಡ್ಸ ಸರ್ಕಲ್ ವತಿಯಿಂದ ಆ ಮಹಿಳೆಯನ್ನ ಬೆಳಗಾವಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ ನಂತರ ಈ ಮಹಿಳೆಯ ಕುಟುಂಬದವರನ್ನ ಪತ್ತೆ ಮಾಡಿ ಅವರನ್ನ ಅವರಿಗೆ ಮಾಹಿತಿ ತಿಳಿಸಿದ್ದಾರೆ ತಕ್ಷಣ ಆಗಮಿಸಿದ ರುದ್ರಗೌಡ ಪಾಟೀಲ್ ಅವರು ಆಗಮಿಸಿ ಪೃಥ್ವಿ ಸಿಂಗ್ ಹಾಗೂ ಸಂತೋಷ್ ದಾರೆಕರ್ ಅವರಿಗೆ ಧನ್ಯವಾದಗಳನ್ನ ಸಲ್ಲಿಸಿದ್ದಾರೆ.

promotions

ನಂತರ ರುದ್ರಗೌಡ ಪಾಟೀಲ ಅವರು ಮಹಿಳೆಯನ್ನ ಹುಷಾರಾದ ಬಳಿಕ ಮನೆಗೆ ಕರೆದುಕೊಂಡು ಹೋಗಲಾಗುವುದು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಪೃಥ್ವಿ ಸಿಂಗ್ ಫೌಂಡೇಶನ್‌ನ ಮುಖ್ಯಸ್ಥ ಪೃಥ್ವಿ ಸಿಂಗ್ ಹಾಗೂ ಪೇಸ್ಬುಕ್ ಪ್ರೇಂಡ್ಸ ಸರ್ಕಲನ್ ಸಂತೋಷ್ ದಾರೆಕರ್ ಅವರಿಗೆ ಅವರ ಕುಟುಂಬದವರಿಂದ ಧನ್ಯವಾದಗಳನ್ನ ತಿಳಿಸಿದರು.

promotions

ಇದೇ ಸಂದರ್ಭದಲ್ಲಿ ಜಸ್ವೀರ್ ಸಿಂಗ್ ಪೃಥ್ವಿ ಸಿಂಗ್ ಫೌಂಡೇಶನ್‌ನ ಮುಖ್ಯಸ್ಥರು,ಅವಧೂತ್ ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು.

Read More Articles