ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದ ಯುವಕನ ಸಮಸ್ಯೆ ಆಲಿಸಿದ ಪೃಥ್ವಿ ಸಿಂಗ್ ಪೌಂಡೇಶನ ಸಂಸ್ಥಾಪಕ.
- 15 Jan 2024 , 4:00 AM
- Belagavi
- 122
ಬೆಳಗಾವಿ: 5 ವರ್ಷಗಳಿಂದ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದು ಹಾಲಪ್ಪ ನಿಂಗಪ್ಪ ಉಚಗಾಂವಕರ ಅವರು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆಗೆ ಒಳಪಟ್ಟಿದ್ದರು.ಆದರೆ ಮನೆ ಪರಿಸ್ಥಿತಿ ಗಂಭೀರ ಇರುವುದರಿಂದ ತಕ್ಷಣ ಸ್ಪಂದಿಸಿದ ಪೃಥ್ವಿ ಸಿಂಗ್.

ಹೌದು ಬೆಳಗಾವಿಯಲ್ಲಿ ಯಾರೇ ಕಷ್ಟದಲ್ಲಿ ಇದ್ದರೂ ಕೂಡಾ ತಕ್ಷಣ ಸ್ಪಂದಿಸುವ ಎಕೈಕ್ ವ್ಯಕ್ತಿ ಅಂದರೆ ಪೃಥ್ವಿ ಸಿಂಗ್ ಅಂತಾ ಹೇಳಬಹುದು ಆದರೆ ಇವತ್ತು ಹಲವು ದಿನಗಳಿಂದ ಕಿಡ್ನಿ ವೈಪಲ್ಯದಿಂದ ಬಳಲಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಾಲಪ್ಪ.ನಿಂಗಪ್ಪ.ಉಚಗಾಂವಕರ ಅವರ ಚಿಕಿತ್ಸೆಗೆ ಬರುವ ದಿನದ ಖರ್ಚುಗಳನ್ನ ನೀಡಿದ್ದು ಹಾಗೇ ಪ್ರತಿ ಡಯಾಲಿಸಿಸ್ ಹಷವನ್ನ ಕೂಡಾ ಉಚಿತವಾಗಿ ಮಾಡಿಸಿ ಹಾಲಪ್ಪನ ಜೀವನದಲ್ಲಿ ದೊಡ್ಡ ದಾನಿಗಳೆಂದು ಕರೆಸಿಕೊಂಡ ಪೃಥ್ವಿ ಸಿಂಗ್ ಮತ್ತು ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್ ಅವರ ಸಹಾಯಕ್ಕೆ ಧನ್ಯವಾದಗಳು ಸಲ್ಲಿಸಿದ ಹಾಲಪ್ಪ.

ಅದೇ ರೀತಿ ಅವರ ಕುಟುಂಬಕ್ಕೆ ಕುರಿ ಸಾಕಿ ಜೀವನ ನಡೆಸುತ್ತಿದ್ದು ಹಾಲಪ್ಪ ಅವರ ಕುಟುಂಬದ ಪರಿಸ್ಥಿತಿ ನೋಡಿ ಒನ್ ಟಚ್ ಫೌಂಡೇಶನ್ ಮುಖ್ಯಸ್ಥ ವಿಠ್ಠಲ್ ಪಾಟೀಲ್ ಇವರು ದಿನಬಳಕೆ ವಸ್ತುಗಳನ್ನು ಅವರ ಕುಟುಂಬಕ್ಕೆ ನೀಡುವ ಭರವಸೆಯನ್ನ ನೀಡಿದರು ಹಾಗೇ ಪೃಥ್ವಿ ಸಿಂಗ್ ಪೌಂಡೇಶನ ಸಂಸ್ಥಾಪಕ ಪೃಥ್ವಿ ಸಿಂಗ್ ಅವರು ಇನ್ನು ಹೆಚ್ಚಿನ ಸಹಾಯ ಕುರಿತು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂತೋಷ್ ದಾರೆಕರ್,ಜಸ್ವೀರ್ ಸಿಂಗ್,ಅವಧೂತ್ ತುದೇವಕರ್,ಮಹಾದೇವ್ ಲಾಡ್,ಕಲ್ಪನಾ ಸಾವಗಾಂವಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.










