ಮಾನವೀಯ ಗುಣಗಳು ಭಾರತ ದೇಶದ ಅಂತರ್ಗತ ಶಕ್ತಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
- 14 Jan 2024 , 10:59 PM
- Bengaluru
- 137
ಬೆಂಗಳೂರು: ಮಾನವೀಯ ಗುಣಗಳೇ ಭಾರತದ ದೇಶದ ಅಂತರ್ಗತ ಶಕ್ತಿಯಾಗಿದ್ದು, ಪ್ರತಿ ಭಾರತೀಯನನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ ಆವೃಣದ ಬಳಿ ಅಖಿಲ ಭಾರತ ಪರಿಶಿಷ್ಟ ಜಾತಿ/ವರ್ಗದ ರೈಲ್ವೆ ನೌಕರ ಸಂಘದ ವತಿಯಿಂದ ಸಂವಿಧಾನ ಶಿಲ್ವಿ ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.

ಡಾ.ಅಂಬೇಡ್ಕರ್ ಅವರು ರಚಿಸಿದ ಭಾರತ ಸಂವಿಧಾನ ಶ್ರೇಷ್ಟ ಸಂವಿಧಾನವಾಗಿದೆ. ಕೇವಲ ಆಡಳಿತಗಾರರಿಗೆ ಮಾತ್ರವಲ್ಲ, ದೇಶದ ಪ್ರತಿ ನಾಗರಿಕನಿಗೂ ಅಧಿಕಾರವನ್ನು ಕೊಟ್ಟಿದೆ. ನ್ಯಾಯ,ನೀತಿ, ಬಡವರಿಗೆ ರಕ್ಷಣೆ, ತುಳಿತಕ್ಕೊಳಗಾದವರಿಗೆ ಸ್ವಾಭಿಮಾನವನ್ನು ನೀಡಿದೆ ಎಂದರು.
ಡಾ.ಅಂಬೇಡ್ಕರ್ಅವರವಿಚಾರಧಾರೆಯನ್ನುಕಾರ್ಯರೂಪಕ್ಕೆತರುವುದುನಮ್ಮೆಲ್ಲರಕರ್ತವ್ಯ:
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಳಹಂತದ, ಅವಕಾಶವಂಚಿತ, ಶಿಕ್ಷಣವಂಚಿತ ಸಮಾಜದವರು ಸ್ವಾವಲಂಬನೆಯ ಸ್ವಾಭಿಮಾನದ ಸಮಾಜವನ್ನು ಕಟ್ಟಿಕೊಳ್ಳಲು ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಹಕ್ಕುಗಳಿಂದ ವಂಚಿತರಾಗಿದ್ದ ಜನರಿಗೆ ನ್ಯಾಯ ಒದಗಿಸಿದರು.
ಸ್ವತಂತ್ರ ಭಾರತದಲ್ಲಿ ತುಳಿತಕ್ಕೊಳಗಾದ ಜನರ ಭವಿಷ್ಯದ ಬಗ್ಗೆ ಚಿಂತನೆ ಮಾಡಿದವರು. ಆರ್‍ಬಿಐ ಸ್ಥಾಪನೆಗೆ ರೂಪುರೇಷೆ ರಚಿಸಿದರು. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಬದಲಾವಣೆಯನ್ನು ತರುವ ಮೂಲಕ ಅವರ ಸಾವಿರಾರು ವರ್ಷ ಗಟ್ಟಿನಿಲ್ಲುವಂತಹ ಕಾರ್ಯಗಳನ್ನು ಮಾಡಿದ್ದಾರೆ. ಅವರ ವಿಚಾರಧಾರೆಗಳನ್ನು ಕಾರ್ಯರೂಪಕ್ಕೆ ತರುವುದು ನಮ್ಮೆಲ್ಲರ ಕರ್ತವ್ಯ. ಡಾ.ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಯಿಂದ ಅವರ ಮೌಲ್ಯಗಳನ್ನು ಸ್ಥಾಪಿಸಿದಂತಾಗಿದೆ ಎಂದು ತಿಳಿಸಿದರು.










