ಅಬಬ್ಬಾ ! ಬಲೆಗೆ ಬಿತ್ತು ಭಾರಿ ಮೀನು, ಹಾಗಾದ್ರೆ ಅದರ ತೂಕ ಎಷ್ಟು ಗೊತ್ತಾ..?
- 15 Jan 2024 , 5:09 AM
- Mysuru
- 131
ಮೈಸೂರು: ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ದಕ್ಷಿಣ ಕಾಶಿಯಿಂದ ಪ್ರಸಿದ್ಧಿಯಾಗಿರುವ ಚುಂಚನಕಟ್ಟೆ ಗ್ರಾಮದ ಪ್ರಸಿದ್ದ ಶ್ರೀರಾಮ ದೇವಸ್ಥಾನದ ಹತ್ತಿರವಿರುವ ಕಾವೇರಿ ನದಿ ತೀರದಲ್ಲಿ ಬರೋಬ್ಬರಿ 350 ಕೆ ಜಿ ತೂಕದ ಮೀನು ಗ್ರಾಮಸ್ಥರ ಕೈಗೆ ಸಿಕ್ಕಿದೆ. ರಾಜ್ಯದ 7ನೇ ಅತಿದೊಡ್ಡ ಚುಂಚನ ಪಾಲ್ಸ್ ಇದ್ದು ಪಕ್ಕದಲ್ಲಿಯೇ ಕಾವೇರಿ ನದಿ ಹರಿಯುತ್ತಿದೆ.

ಈ ನದಿಯ ದಡದಲ್ಲಿ 350 ಕೆಜಿ ಮೀನು ಗ್ರಾಮಸ್ಥರಿಗೆ ಸೆರೆ ಸಿಕ್ಕಿದೆ. ಸ್ಥಳೀಯರಿಗೆ ಈ ದೊಡ್ಡ ಮೀನು ಬಲೆಗೆ ಬಿದ್ದಿದ್ದು, ಮೀನು ನೋಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಅಬ್ಬಾಬಾ ಎಂದು ಬಾಯಿ ಬೀಡುತ್ತಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಮಳೆ ಪ್ರಾರಂಭವಾಗಿದ್ದು, ನದಿ ಪಾತ್ರದ ಮೇಲ್ಭಾಗದಿಂದ ಮೀನುಗಳು ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಈ ಬೃಹತ್ ಮೀನು ಬಲೆಗೆ ಬಿದ್ದ ವಿಷಯ ಹೊರಬಿದ್ದ ಕೂಡಲೇ ಜನರು ಆಗಮಿಸಿ ಕಣ್ತುಂಬಿಕೊಂಡಿದ್ದಾರೆ.

ವರದಿ: ಸೋಮಶೇಖರ ಜೇ. ಗೌಡ,
ಚಪ್ಪರದಹಳ್ಳಿ.










