ಕರ್ನಾಟಕದಲ್ಲಿ ಜನಸಂಘ ಮತ್ತು ಭಾ.ಜ.ಪ ಕಟ್ಟಿ ಬೆಳೆಸುವಲ್ಲಿ ಜಗನ್ನಾಥ ರಾವ್ ಜೋಶಿ ಅವರದ್ದು ಪ್ರಮುಖ ಪಾತ್ರ:ಮುಖ್ಯಮಂತ್ರಿ ಬೊಮ್ಮಾಯಿ
- 2 Jan 2024 , 12:32 AM
- Belagavi
- 98
ಬೆಳಗಾವಿ:


ಅವರು ಇಂದು ಜನಕಲ್ಯಾಣ ಟ್ರಸ್ಟ್, ಬೆಳಗಾವಿ ಇವರ ವತಿಯಿಂದ ಆಯೋಜಿಸಿರುವ ಜಗನ್ನಾಥರಾವ್ ಜೋಷಿ ಅವರ ಜನ್ಮಶತಾಬ್ಧಿ ಸ್ಮಾರಕ ಭವನದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
*ಭದ್ರ ಬುನಾದಿ* ಬಿಜೆ.ಪಿ ಮತ್ತು ಜನಸಂಘದ ವಿಚಾರಗಳನ್ನು ಸಾರ್ವತ್ರಿಕವಾಗಿ ಜೋಶಿಯವರು ತಿಳಿಸಿದರು. ಅವರು ಭದ್ರ ಬುನಾದಿ ಹಾಕಿದ್ದರಿಂದ ಭಾ.ಜ.ಪ ಕರ್ನಾಟಕದಲ್ಲಿ ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಿದೆ. ಅದರ ಶ್ರೇಯಸ್ಸು ಜಗನ್ನಾಥ್ ರಾವ್ ಜೋಶಿ ಅವರಿಗೆ ಸಲ್ಲುತ್ತದೆ ಎಂದರು.
ಜಗನ್ನಾಥ ರಾವ್ ಜೋಶಿ ಅವರ ಅಪ್ಪಟ ಅಭಿಮಾನಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ಅವರನ್ನು ಹತ್ತಿರದಿಂದ ನೋಡುವ ಅವಕಾಶ ಹಾಗೂ ಧಾರವಾಡ ಚುನಾವಣೆಯಲ್ಲಿ ಕೆಲಸ ಮಾಡುವ ಅವಕಾಶ ನನಗೆ ದೊರೆತಿತ್ತು. ನಮ್ಮ ತಂದೆಯವರೊಂದಿಗೆ ಆತ್ಮೀಯ ಒಡನಾಟವಿತ್ತು ಎಂದು ಸ್ಮರಿಸಿದರು.
ದೇಶಭಕ್ತಿ ಮತ್ತು ಗಟ್ಟಿತನಬಾಲ ಗಂಗಾಧರ ತಿಲಕ್ ಅವರ ದೇಶಭಕ್ತಿ ಮತ್ತು ಗಟ್ಟಿತನ ಅವರಲ್ಲಿತ್ತು. ಅಟಲ್ ಬಿಹಾರಿ ವಾಜಪೇಯಿ ಅವರಂತೆ ವಾಗ್ಮಿ ಹಾಗೂ ಅಜಾತಶತ್ರುವಾಗಿ ಸರ್ವರಿಗೂ ಪ್ರಿಯರಾಗಿದ್ದರು. ಕನ್ನಡಿಗರಾದ ಅವರು ಪುಣೆಯನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡವರು. ಮಿಲಿಟರಿ ಯಲ್ಲಿ ಕ್ಲರ್ಕ್ ಆಗಿದ್ದವರು ನಂತರ ಆರ್.ಎಸ್.ಎಸ್ ಸೇರಿದರು. ಅದರ ತತ್ವ ಸಿದ್ದಂತಗಳನ್ನು ಸಂಪೂರ್ಣವಾಗಿ ಮೈಗೂಡಿಸಿಕೊಂಡು ಪ್ರಚಾರಕರಾಗಿ ಮುಂದೆ ನಾಯಕರಾಗಿ ಬೆಳೆದರು ಎಂದರು.
ಜನಪ್ರಿಯತೆಉತ್ತರ ಕರ್ನಾಟಕದ ಪ್ರತಿ ಗ್ರಾಮದಲ್ಲಿಯೂ ಅವರು ಜನಪ್ರಿಯ ರಾಗಿದ್ದರು. ಅವರಿಂದ ಬಹಳಷ್ಟು ಪ್ರೇರಣೆ ಪಡೆದಿದ್ದೇವೆ. ದೇಶ, ಅದರ ಜನಾಂಗಗಳ ಬಗ್ಗೆ, ದೇಶವನ್ನು ಮುನ್ನಡೆಸುವ ಚಿಂತನೆಯ ಬಗ್ಗೆ ಅವರಿಗೆ ಅಪಾರವಾದ ಸ್ಪಷ್ಟತೆ ಇತ್ತು ಎಂದರು.
ಗೋವಾ ವಿಮೋಚನಾ ಚಳವಳಿಯಲ್ಲಿ ಪ್ರಮುಖ ಪಾತ್ರ ಗೋವಾ ವಿಮೋಚನಾ ಚಳವಳಿಯಲ್ಲಿ ಅವರ ಪಾತ್ರ ಬಹಳ ಪ್ರಮುಖ. ಈ ಭಾಗದ ಜನ ಚಳವಳಿಯಲ್ಲಿ ಧುಮುಕಲು ಜಗನ್ನಾಥ ರಾವ್ ಕಾರಣರಾಗಿದ್ದರು. ಗೋವಾ ಗಡಿ ಒಳಗೆ ಹೋಗಲು ಆಗ ವೀಸಾ ಬೇಕಾಗಿತ್ತು. ಅವರನ್ನು ವಿಚಾರಣೆ ಗೆ ಒಳಪಡಿಸಿದ ಸಂದರ್ಭದಲ್ಲಿ ಭಾರತದಲ್ಲಿ ಎಲ್ಲಿಯೇ ಓಡಾಡಲು ವೀಸಾ ಬೇಕಾಗಿಲ್ಲ. ಗೋವಾ ಭಾರತದಿಂದ ಪ್ರತ್ಯೇಕ ಎಂದು ಭಾವಿಸಿಲ್ಲ ಎಂದರು. ಅವರಲ್ಲಿ ಅಪಾರವಾದ ಸ್ಥಿತಪ್ರಜ್ಞತೆ ಇತ್ತು. ಆಹಾರಪ್ರಿಯರೂ ಆಗಿದ್ದರು. ಹಾಸ್ಯಪ್ರಜ್ಞೆಯೂ ಅವರಲ್ಲಿ ಇತ್ತು ಎಂದರು. ಅವರ ಭಾಷಣ ಕೇಳಲು ಲಕ್ಷಗಟ್ಟಲೆ ಜನ ಸೇರುತ್ತಿದ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.
<ಆದರ್ಶಗಳನ್ನು ಕಾರ್ಯರೂಪಕ್ಕೆ ತರಬೇಕುಅವರ ಆದರ್ಶಗಳನ್ನು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರೆ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಅವರ ವೈಚಾರಿಕತೆ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ತಲುಪಿಸುವ ಕೆಲಸ ಕಾರ್ಯಕ್ರದಿಂದಾಗಿದೆ ಎಂದರು.










