ಕುಂದಾನಗರಿಯಲ್ಲಿ ಕಳೆಗಟ್ಟಿದ ಬಸವ ಜಯಂತಿ

ಬೆಳಗಾವಿ : ಕುಂದಾನಗರಿ ಬೆಳಗಾವಿಯ ಗಲ್ಲಿ ಗಲ್ಲಿಗಳಲ್ಲಿ ಬಸವ ಜಯಂತಿ ಸಂಭ್ರಮ ಮನೆ ಮಾಡಿತ್ತು.ಬಸವ ಜಯಂತಿ ಪ್ರಯುಕ್ತ ಬಡಾವಣೆಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು.

promotions

ಬೆಳಗಾವಿಯ ರಾಮತೀರ್ಥ ನಗರದಲ್ಲಿ ಬಸವ ಜಯಂತಿ ಪ್ರಯಕ್ತ ಮೆರವಣಿಗೆ ನಡೆಸಲಾಯಿತು. ರಾಮತೀರ್ಥ ನಗರ ವೀರಭದ್ರೇಶ್ವರ ಕಮೀಟಿ ವತಿಯಿಂದ ಅದ್ಧೂರಿ ಬಸವ ಜಯಂತಿ ಆಚರಣೆ ಮಾಡಲಾಯಿತು.

promotions

ಜಗಜ್ಯೋತಿ ಬಸವೇಶ್ವರ, ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರವಿಟ್ಟು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದರು.

ಮೆರವಣಿಗೆಯುದ್ಧಕ್ಕೂ ಮನೆ ಎದುರು ವಾಹನ ಬರುತ್ತಿದ್ದಂತೆ ಭಕ್ತಿ ಭಾವದಿಂದ ನಮಸ್ಕರಿಸಿದ ಮಹಿಳೆಯೆರು ಮಕ್ಕಳು. ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಹನುಮಂತ ಕೊಂಗಾಳಿ, ಸ್ಥಳೀಯ ಬಿಜೆಪಿ ಮುಖಂಡ ಈರಯ್ಯ ಖೋತ, ಸಾಮಾಜಿಕ ಕಾರ್ಯಕರ್ತ ಸುರೇಶ್ ಯಾದವ್ ಸೇರಿ ಹಲವರು ಭಾಗಿಯಾಗಿದ್ದರು.

Read More Articles