ಕನ್ನಡ‌‌ ಭಾಷೆಗೆ ಮಲತಾಯಿ ‌ಧೋರಣೆ ಮಾಡಿದ ಆಮ್ ಆದ್ಮಿ

ಬೆಳಗಾವಿ: ಭ್ರಷ್ಟಾಚಾರ ನಿರ್ಮೂಲನೆ , ಸರ್ವಧರ್ಮದವರನ್ನು ಸಮನ್ವಯತೆಯಿಂದ ಕರೆದುಕೊಂಡು‌ ಹೋಗುವ ಸಂಕಲ್ಪ ತೊಟ್ಟಿರುವ ಆಮ್ ಆದ್ಮಿ ಪಾರ್ಟಿ ಬೆಳಗಾವಿಯ ಮುಖಂಡರಿಂದ ಕನ್ನಡಕ್ಕೆ ಅವಮಾನ ಮಾಡಿದ ನಾಮಫಲಕದಿಂದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

promotions

ಎರಡೂ ದಿನದಲ್ಲಿ ಪವಿತ್ರ ರಂಜಾನ ಹಾಗೂ ಶಿವಬಸವ ಜಯಂತಿಯ ಏಕಕಾಲಕ್ಕೆ ಬಂದಿವೆ. ಜಿಲ್ಲೆಯಲ್ಲಿ ಎಲ್ಲ ಕನ್ನಡಿಗರು ಸೇರಿಕೊಂಡು ಸಂಭ್ರದಿಂದ ಆಚರಣೆ ಮಾಡುತ್ತಿದ್ದಾರೆ. ಆದರೆ ಆಮ್ ಆದ್ಮಿ ಪಾರ್ಟಿಯಿಂದ ಕನ್ನಡಕ್ಕೆ ಅಪಮಾನ ಮಾಡಿ ಆಂಗ್ಲ‌ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದು ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ.

promotions

ಗಡಿನಾಡು ಬೆಳಗಾವಿ ಮೊದಲೇ ಸೂಕ್ಷ್ಮ ಜಿಲ್ಲೆ. ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು. ಅಂಥದರಲ್ಲಿ ಕುಂದಾನಗರಿ ಬೆಳಗಾವಿಯಲ್ಲಿ ಕನ್ನಡಕ್ಕೆ ಅಪಮಾನ ಮಾಡಿರುವ ಆಮ್ ಆದ್ಮಿ ಮರಾಠಿಗರನ್ನು ಓಲೈಸುವ ನಿಟ್ಟಿನಲ್ಲಿ ಮರಾಠಿಯಲ್ಲಿ ಮೊದಲು ಶುಭಾಶಯ ಕೋರಿ, ಬಳಿಕ ಕನ್ನಡಕ್ಕೆ ಎರಡನೇ ಸ್ಥಾನ ನೀಡಿರುವುದು ಆಮ್ ಆದ್ಮಿ ಪಾರ್ಟಿ ಕನ್ನಡ ರಕ್ಷಣೆ ಮಾಡುವ ಬದಲು ನಾಡದ್ರೋಹಿ ಕುಮ್ಮಕ್ಕು ನೀಡುವಂತಿದೆ.

ಗಡಿನಾಡ ಬೆಳಗಾವಿಯಲ್ಲಿ ಕನ್ನಡ ಭಾಷೆಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಆಮ್ ಆದ್ಮಿ ಮಲತಾಯಿ ಧೋರಣೆಯ ವಿರುದ್ಧ ಕನ್ನಡ ಸಂಘಟನೆಗಳು ಸಿಡಿದು ನಿಂತಿವೆ. ಪಾಲಿಕೆ ಅಧಿಕಾರಿಗಳು ಕನ್ನಡ ಭಾಷೆಗೆ ಮಾಡಿದ ಅವಮಾನದ ಫಲಕನಗಳನ್ನು ತೆರವುಗೊಳಿಸಬೇಕೆಂದು ಕನ್ನಡಪರ ಸಂಘಟನೆಗಳು ಆಗ್ರಹಿಸುತ್ತಿವೆ.

Read More Articles