ವಾಯವ್ಯ ಶಿಕ್ಷಕರ ಮತಕ್ಷೇತ್ರ: ಚುನಾವಣಾ ವೀಕ್ಷಕರಾಗಿ ಮನೀಷ್ ಮೌದ್ಗಿಲ್ ನೇಮಕ
- 15 Jan 2024 , 12:29 AM
- Belagavi
- 105
ಬೆಳಗಾವಿ: ಕರ್ನಾಟಕ ವಾಯವ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣಾ ವೀಕ್ಷಕರಾಗಿ ಹಿರಿಯ ಐ.ಎ.ಎಸ್. ಅಧಿಕಾರಿ ಮನೀಷ್ ಮೌದ್ಗಿಲ್ ಅವರನ್ನು ಚುನಾವಣಾ ಆಯೋಗ ನೇಮಿಸಿದೆ.

ಈ ಮತಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಏನಾದರೂ ದೂರು ಅಥವಾ ಮಾಹಿತಿಯನ್ನು ನೀಡಲು ಅವರ ಮೊಬೈಲ್ ಸಂಖ್ಯೆ- 9483680431 ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.











