ಕರಾಟೆಯಲ್ಲಿ ಸಾಧನೆಗೈದ ಶಿವಾ ಫೌಂಡೇಶನ್ ಮಕ್ಕಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಸನ್ಮಾನ

ಗೋಕಾಕ: ಈಚೆಗೆ ಹರಿಯಾಣದಲ್ಲಿ ನಡೆದ ಯೂತ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಸಂಯುಕ್ತಾಶ್ರಯದಲ್ಲಿ ನಡೆದ ಯೂತ್ ಗೇಮ್ಸ್ ನ್ಯಾಷನಲ್ ಗೋಲ್ಡನ್ ಕಪ್ 2022 ದಲ್ಲಿ ಶಿವಾ ಫೌಂಡೇಶನ್ ಮಕ್ಕಳು ಕರಾಟೆಯಲ್ಲಿ ವಿಜೇತರಾಗಿದ್ದು, ಈ ಸಾಧನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹಾಗೂ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಶಿವಾ ಫೌಂಡೇಶನ್ ಮಕ್ಕಳಾದ ಬಾಳಪ್ಪಾ ಬಡಿಗೇರ, ದುರ್ಗಪ್ಪಾ ಜಾರಕಿಹೊಳಿ, ಇಬ್ಬರು ಬಂಗಾರದ ಪದಕ, ಸಾಗರ್ ಕರೆಕ, ಶ್ವೇತಾ ಹಿರೇಮಠ ಇಬ್ಬರು ವಿದ್ಯಾರ್ಥಿಗಳು ಬೆಳ್ಳಿಯ ಪದಕ ಗಳಿಸಿದ್ದಾರೆ. ತರಬೇತಿ ನೀಡಿದ ಸತೀಶ್ ಜಾರಕಿಹೊಳಿ ಫೌಂಡೇಶನ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಶಿವಾ ಫೌಂಡೇಶನ್ ಮಕ್ಕಳಿಗೆ ಕಳೆದ 7 ತಿಂಗಳಿಂದ ಉಚಿತ ಕರಾಟೆ ತರಬೇತಿ ನೀಡುವ ಮೂಲಕ ಕ್ರೀಡೆಗೆ ಪ್ರೋತ್ಸಾಹ ನೀಡಿದ್ದರು.

promotions

 

promotions

ಸ್ವತಃ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ವಿಜೇತ ವಿದ್ಯಾರ್ಥಿಗಳಿಗೆ ಸತ್ಕಾರ ಮಾಡಿ, ಇನ್ನೂ ಹೆಚ್ಚಿನ ಸಾಧನೆ ಮಾಡಿ ನಿಮ್ಮ ಜತೆ ಸತೀಶ್ ಜಾರಕಿಹೊಳಿ ಫೌಂಡೇಶನ್ ತಂಡ ಸದಾ ಇರುತ್ತದೆ ಎಂದು ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ತಂಡದ ಜುಬೇರ್ ಮಿರ್ಜಾಬಾಯಿ, ತರಬೇತಿಗಾರ ದುರ್ಯೋಧನ ಕಡಕೋಳ, ಮಹೇಶ ಜೊತೆಣ್ಣವರ ಹಾಗೂ ಸತೀಶ್ ಜಾರಕಿಹೊಳಿ ಫೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು.

Read More Articles