ಚುನಾವಣೆಯಲ್ಲಿ ಸರಕಾರದ ಹಣ ದುರ್ಬಳಕೆ: ಅಧಿಕಾರಿಗಳ ಮೇಲೆ ಕ್ರಮಕ್ಕೆ ಗಡಾದ ಆಗ್ರಹ
- 17 Dec 2023 , 11:54 PM
- Belagavi
- 146
ಬೆಳಗಾವಿ: ಲೋಕಸಭಾ ಉಪಚುನಾವಣೆಯಲ್ಲಿ ಸರಕಾರದ ಹಣ ದುರುಪಯೋಗ ಮಾಡಿಕೊಂಡ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಆಗ್ರಹಿಸಿದ್ದಾರೆ.


ಬೆಳಗಾವಿ ಲೋಕಸಭೆಯ ಉಪಚನಾವಣೆಯ ವೆಚ್ಚಕ್ಕಾಗಿ ಸರಕಾರದಿಂದ ಬಿಡುಗಡೆಯಾದ ಹಣದಲ್ಲಿ ವೆಚ್ಚ ಮಾಡಿ ಬಾಕಿ ಉಳಿದ ಹಣವನ್ನು ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೆಗೆದುಕೊಂಡು ಹೋಗಿರುವ ಹಾಲಿ: ದಾಂಡೇಲಿಯ ತಹಶೀಲ್ದಾರ ಮತ್ತು ವಿಷಯ ಗೊತ್ತಿದ್ದರೂ ಸರಕಾರಕ್ಕೆ ಈ ಕುರಿತು ವರದಿ ನೀಡದೇ ಇರುವ ಬೆಳಗಾವಿಯ ಈಗಿನ ತಹಶೀಲ್ದಾರರ ಮೇಲೆ ವರ್ಷಗಳೇ ಕಳೆದರೂ ಕಮ ಕೈಗೊಳ್ಳದೇ ಇರುವ ಹಿರಿಯ ಅಧಿಕಾರಿಗಳ ನಡೆಯು ಅನುಮಾನಗಳನ್ನು ಹುಟ್ಟುಹಾಕಿರುವುದಲ್ಲದೇ ಇವರು ಸಹ ಈ ಹಗರಣದಲ್ಲಿ ಭಾಗಿಯಾಗಿರುವರೇ? ಎಂಬ ಸಂದೇಹ ಉಂಟಾಗಿದ್ದು, ಈ ಪ್ರಕರಣದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳದೇ ಇದ್ದಲ್ಲಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವುದಾಗಿ ತಿಳಿಸಿ ದಾಖಲೆಗಳೊಂದಿಗೆ ಸರಕಾರದ ಮುಖ್ಯ ಕಾರ್ಯದರ್ಶಿ ಚುನಾವಣಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದಿದ್ದಾರೆ.
ಕಳೆದ 2021 ರಂದು ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ ದಾಖಲೆಗಳ ಸಮೇತವಾಗಿ ದೂರು ನೀಡಲಾಗಿತ್ತು. ಸದರ ದೂರಿನಲ್ಲಿರುವ ಪ್ರತಿಯೊಂದು ಅಂಶಗಳನ್ನು ಪರಿಶೀಲಿಸಿ ಬವಸಗಳೊಳಗಾಗಿ ಬಿದ್ದಾಗಿ ಹಾಜರಾಗಿ ಹೇಳಿಕೆ ನೀಡಿದೇ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರೂ ಇಲ್ಲಿಯವರೆಗೆ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.19 ಡಿ.2021 ರಂದು ದಾಂಡೇಲಿ ತಹಶೀಲ್ದಾರರಿಗೆ ನೋಟಿಸ್ ಕೂಡ ಜಾರಿಮಾಡಲಾಗಿತ್ತು. ಇವರಿಂದ ಸಮರ್ಪಕ ಉತ್ತರ ಬಾರದೇ ಇದ್ದಾಗ 2022ರಂದು 4ಅಧಿಕಾರಿಗಳ ಸಮೀತಿಯನ್ನು ರಚಿಸಿ, ಈ ವಿಷಯದ ಬಗ್ಗೆ ಪರಿಶೀಲನೆ ನಡೆಸಿ ಇದಿವಸಗಳಲ್ಲಿ ವರದಿ ಸಲ್ಲಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳು ಈ ಸಮೀತಿಗೆ ಸೂಚನೆ ನೀಡಿದ್ದರೂ, ಆದರೆ ಸಮೀತಿಯು ರಚನೆಯಾಗಿ 54 ದಿನ ಕಳೆದರೂ ಸಮಿತಿಯವರು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.










