ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಬೆಳಗಾವಿ: ಬೆಳಗಾವಿ ನಗರದ ಕಣಬರ್ಗಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಸೇವಾ ಸಂಸ್ಥೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೇಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಲಾಯಿತು.

promotions

ಕಾಣದ ದೇವರನ್ನು ಹುಡುಕಿ ಪ್ರಯೋಜನ ಇಲ್ಲ, ನಿಮಗೆ ಆಪತ್ತು ಕಾಲದಲ್ಲಿ ಸಹಾಯ ಮಾಡುವವರೇ ದೇವರು. ಜಾತ್ರೆ, ಸಭೆ, ಸಮಾರಂಭ ಮಾಡಿ ಹಣ ಖರ್ಚು ಮಾಡುವುದುಕ್ಕಿಂತ ಅದೇ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಉಪಯೋಗಿಸಿ, ಹಣ, ಆಸ್ತಿ ಕಳಿದುಕೊಳ್ಳಲು ಸಾಧ್ಯವಿದೆ. ಆದರೆ ಜ್ಞಾನವನ್ನು ಯಾರು ಕಸಿದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಮಕ್ಕಳಿಗೆ ಶಿಕ್ಷಣ ನೀಡಲು ಮೊದಲ ಆದ್ಯತೆ ನೀಡಬೇಕೆಂದು ಸಲಹೆ ನೀಡಲಾಯಿತು.

promotions

ಇದೇ ವೇಳೆ ಓಲಂಪಿಕ ಕ್ರೀಡಾ ಪಟು ಸಂಜಯ ಹಮ್ಮಣ್ಣವರ, ಅಂತಾರಾಷ್ಟ್ರೀಯ ಈಜು ಪಟು ರಾಘವೇಂದ್ರ ಅನ್ವೇಕರ ಅವರಿಗೆ ವಿಶ್ವ ರತ್ನ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಕ್ರೀಡಾ ರತ್ನ ಪ್ರಶಸ್ತಿ. ಆಶ್ರಯ ಫೌಂಡೇಶನ್‌ ಸಂಸ್ಥಾಪಕಿ ನಾಗರತ್ನ ರಾಮಗೌಡರ, ಸಮಾಜ ಸೇವಕರಾದ ಲಕ್ಷ್ಮಣ ಮಾಲಾಯಿ, ಸುನೀಲ ನೇಗಿಹಾಳ ಅವರಿಗೆ ವಿಶ್ವ ರತ್ನ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಸೇವಾ ರತ್ನ ಪ್ರಶಸ್ತಿ. ಸಮಾಜ ಸೇವಕರಾದ ಆಕಾಶ ಹಲಗೇಕರ್‌ ಅವರಿಗೆ ವಿಶ್ವ ರತ್ನ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಕಲಾ ರತ್ನ ಪ್ರಶಸ್ತಿ. ಶಿಕ್ಷಕರಾದ ಸದಾಶಿವ ಘಸ್ತಿ ಅವರಿಗೆ ವಿಶ್ವ ರತ್ನ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಜ್ಙಾನ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Read More Articles