ಗೃಹ ಇಲಾಖೆ ಕಾರ್ಯದರ್ಶಿಯಾಗಿ ನೇಮಕಗೊಂಡ ಮೊದಲ ಮಹಿಳೆ ಐಪಿಎಸ್ ಅಧಿಕಾರಿ ಡಿ ರೂಪಾ

ಬೆಂಗಳೂರು: ಕರ್ನಾಟಕ ಗೃಹ ಇಲಾಖೆ ಕಾರ್ಯದರ್ಶಿಯಾಗಿ ಮೊದಲ ಬಾರಿಗೆ ಐಪಿಎಸ್ಅಧಿಕಾರಿಡಿ ರೂಪಾ ಅವರು ಈ ಹುದ್ದೆಗೆ ನೇಮಕಗೊಂಡಿದ್ದಾರೆ ಹಾಗೂ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು ರಾಜ್ಯದ ಜನತೆಗೆ ಹೆಮ್ಮೆ ತಂದಿದೆ. ಗೃಹ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ಭ್ರಷ್ಟರ ಎದುರು ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವ ಇರಾದೆ ಬಿಡಲ್ಲ ಎಂದು ಭ್ರಷ್ಟರಿಗೆ ಎಚ್ಚರಿಕೆ‌ನೀಡಿದ್ದರೆ ಇವರ ಪೊಲೀಸ್ ವೃತ್ತಿಯ ಘನತೆ ಹೆಚ್ಚಿಸಿದೆ. ಅಷ್ಟೇ ಅಲ್ಲ ಕರ್ನಾಟಕದ ಪೊಲೀಸ್ ವಲಯದಲ್ಲಿ ದಕ್ಷ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದ ಈ ಲೇಡಿ ಸಿಂಗಂ ಕರ್ನಾಟಕದ ಮೊದಲ ಐಪಿಎಸ್ ಆಫೀಸರ್ ಕೂಡ ಹೌದು. ೨೦೦೦ನೇ ಸಾಲಿನ ಐಪಿಎಸ್ ಅಧಿಕಾರಿಯಾಗಿರುವ ಡಿ ರೂಪಾ ಅವರನ್ನು ರೈಲ್ವೆ ಐಜಿಪಿ ಹುದ್ದೆಯಿಂದ ಘನ ಸರ್ಕಾರ ಗೃಹ ಕಾರ್ಯದರ್ಶಿಯಾಗಿ ನೇಮಿಸಿ ಮಹಿಳೆಯರಿಗೆ ಪ್ರಮುಖ ಹುದ್ದೆಯನ್ನು ನೀಡುವುದರ ಮೂಲಕ ತನ್ನ ಬದ್ಧತೆಯನ್ನು ಎತ್ತಿ ತೋರಿಸಿದೆ. ರಾಜ್ಯ ಪೊಲೀಸ್ ಇಲಾಖೆಯ ಆಯಕಟ್ಟಿನ ಹುದ್ದೆಯಲ್ಲಿ ಹತ್ತಾರು ಜವಾಬ್ದಾರಿಗಳನ್ನು ಹೊತ್ತು ಬಹು ದಕ್ಷತೆಯಿಂದ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಅವರದು. ಕಾರ್ಯವೈಖರಿಯ ಗತ್ತನ್ನು ಗಮನಿಸುವುದಾದರೆ ಈ ಹಿಂದೆ ಪರಪ್ಪನ ಅಗ್ರಹಾರದಲ್ಲಿ ಸುಪ್ರೀಂ ಆದೇಶ ಮೀರಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾರಿಗೆ ನೀಡಲಾಗುತ್ತಿದ್ದ ವಿಶೇಷ ಸವಲತ್ತಿನ ವಿರುದ್ಧ ಗಟ್ಟಿದನಿಯಲ್ಲಿ ಮಾತನಾಡಿದ ದಿಟ್ಟೆ ಎಂಬುದನ್ನು ಕರ್ನಾಟಕದ ಜನತೆ ಮರೆತಿಲ್ಲ. ರಾಜ್ಯ ಪೊಲೀಸ್ ಇಲಾಖೆಗೆ ಸಮನ್ವಯತೆಯಿಂದ ಆಡಳಿತ ನಡೆಸಲು ಗೃಹ ಕಾರ್ಯದರ್ಶಿ ಹುದ್ದೆ ಅತ್ಯಂತ ಮಹತ್ವದ್ದು ಎಂದರು.

promotions

promotions

Read More Articles