ವಿವಿಧ ಬೇಡಿಕೆ ಈಡೇರಿಸುವಂತೆ ದಿನಗೂಲಿ ನೌಕರರ ಒತ್ತಾಯ

ಬೆಳಗಾವಿ: ಕರ್ನಾಟಕ ರಾಜ್ಯ ಸರಕಾರಿ ದಿನಗೂಲಿ ನೌಕರರ ಮಹಾಮಂಡಳದ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು. ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ ಎಲ್ಲಾ ಗುತ್ತಿಗೆ ನೌಕರರನ್ನು ಖಾಯಂ ನೌಕರರನ್ನಾಗಿ ನಿಯುಕ್ತಿಗೊಳಿಸಬೇಕು. ಅಲ್ಲದೆ, ಈ ನೌಕರರಿಗೆ ಖಾಯಂ ನೌಕರರಿಗೆ ಇರುವ ಎಲ್ಲ ಸೌಲಭ್ಯಗಳನ್ನು ವಿಸ್ತರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

promotions

ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರ ಅಧಿನಿಯಮ, 2012ರನ್ವಯ ಅಧಿಸೂಚಿಸಲ್ಪಟ್ಟ ಅರ್ಹ ದಿನಗೂಲಿ ನೌಕರರನ್ನು ಖಾಲಿ ಹುದ್ದೆಗಳಲ್ಲಿ ನೇಮಕ ಮಾಡಬೇಕು. ಅಲ್ಲದೆ, ಶೇ.100 ರಷ್ಟು ತುಟ್ಟಿ ಭತ್ಯೆ ಹಾಗೂ ಮನೆ ಬಾಡಿಗೆಯ ಭತ್ಯೆಯನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.t

promotions

30 ವರ್ಷಗಳ ನಂತರ ದಿನಗೂಲಿಯಿಂದ ಖಾಯಂಗೊಂಡ ನೌಕರರಿಗೆ ಅವರು ಖಾಯಂಗೊಂಡಾಗಿನ ವಯಸ್ಸಿಗೆ ಆಗುವ ವ್ಯತ್ಯಾಸವನ್ನು 8 ವರ್ಷಗಳ ಗರಿಷ್ಠ ಮಿತಿಯನ್ನು ರದ್ದುಗೊಳಿಸಿ ಇಡೀ ವ್ಯತ್ಯಾಸದ ವರ್ಷಗಳ ಹೆಚ್ಚುವರಿ ಅರ್ಹತಾ ಸೇವೆ ಎಂದು ಪರಿಗಣಿಸಿ ನಿವೃತ್ತಿ ಸೌಲಭ್ಯವನ್ನು ವಿಸ್ತರಿಸಬೇಕೆಂದು ಒತ್ತಾಯಿಸಿದರು ‌

ಕೆ.ಎಸ್.ಶರ್ಮಾ, ಎಸ್.ಎಲ್. ಸುಗಾವ್ಹಿ, ಐ.ಎಲ್.ಸನದಿ, ರಾಜೇಂದ್ರ ಕಲ್ಲೂರ, ರವಿ ಭಜಂತ್ರಿ, ಪ್ರಶಾಂತ ಮುದ್ದಿ, ಸುಮಿತ್ರಾ ಶೆಟಕೆ, ರತ್ನಾ ತುಪ್ಪದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read More Articles