ತ್ರಿವಳಿ ಕೊಲೆ ಮಾಡಿದ ಆರೋಪಿ ನಿರ್ದೋಷಿ ಎಂದು ಆದೇಶ ಹೊರಡಿಸಿದ ನ್ಯಾಯಾಲಯ

ಬೆಳಗಾವಿ : ಸೇರಿದಂತೆ ಇಡೀ ರಾಜ್ಯವೇ ಬೆಚ್ಚಿ ಬಿಳಿಸಿದ್ದ ಕುವೆಂಪು ನಗರದ ತ್ರಿವಳಿ ಕೊಲೆ ಆರೋಪಿ ಪ್ರವೀಣ್ ಭಟ್ ಗೆ ಧಾರವಾಡ ಹೈಕೋರ್ಟ್ ನಿರ್ದೋಷಿ ಎಂದು ಆದೇಶ ಹೊರಡಿಸಿದೆ. ತ್ರಿವಳಿ ಕೊಲೆ ಪ್ರಕರಣವನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ‌.

promotions

ಬಟ್ಟೆ ವ್ಯಾಪಾರಿಯ ಮನೆಗೆ ನುಗ್ಗಿ ತಾಯಿ ಇಬ್ಬರು ಮಕ್ಕಳ ಕಗ್ಗೊಲೆ ಮಾಡಿದ ಯುವಕ. ಈ ‌ಪ್ರಕರಣದ ಆರೋಪಿ ‌ಪ್ರವೀಣ್ ಭಟ್ ನಿರ್ದೋಷಿ ಎಂದು ಹೈಕೋರ್ಟ್ ಧಾರವಾಡ ಪೀಠ ಆದೇಶ ಹೊರಡಿಸಿದೆ.

promotions

ಇದಕ್ಕಿಂತ ಪೂರ್ವದಲ್ಲಿ ಬೆಳಗಾವಿ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೀಡಿದ್ದ ಆದೇಶ ತಿರಸ್ಕರಿಸಿರುವ ಹೈಕೋರ್ಟ್ ಜೂನ್ 21 ರಂದು ಪ್ರವೀಣ್ ಭಟ್ ನಿರ್ದೋಷಿ ಎಂದು ತೀರ್ಪು ನೀಡಿದೆ. ನ್ಯಾಯಾಧೀಶರಾದ ಕೆ.ಎಸ್. ಮುದಗಲ್, ಎಂಜಿಎಸ್ ಕಮಲ್ ಈ ಆದೇಶ ಹೊರಡಿಸಿದ್ದಾರೆ.

Read More Articles