ಸಸಿ ನೆಡುವ ಮೂಲಕ ಡಾ.ಶಾಮ ಪ್ರಸಾದ್ ಮುಖರ್ಜಿ ಯವರ ಬಲಿದಾನ & ಜನ್ಮ ಜಯಂತಿ ಆಚರಣೆ.
- 17 Dec 2023 , 9:47 PM
- Belagavi
- 202
ಸವದತ್ತಿ: ಬಿಜೆಪಿ ಎಸ್ಸಿ ಮೋರ್ಚಾ ಘಟಕದ ವತಿಯಿಂದ ಡಾ ಶಾಮ ಪ್ರಸಾದ್ ಮುಖರ್ಜಿ ಯವರ ಬಲಿದಾನ ಮತ್ತು ಜನ್ಮ ಜಯಂತಿ ನಿಮಿತ್ಯವಾಗಿ ಪರಿಸರ ಜಾಗೃತಿ ಮತ್ತು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹೌದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಇವತ್ತು ಡಾ.ಶಾಮ ಪ್ರಸಾದ್ ಮುಖರ್ಜಿ ಯವರ ಬಲಿದಾನ ಮತ್ತು ಜನ್ಮ ದಿನದ ನಿಮಿತ್ಯವಾಗಿ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರಕಾರಣಿ ಸದಸ್ಯ ಪೃಥ್ವಿ ಸಿಂಗ್ ಅವರ ನೇತೃತ್ವದಲ್ಲಿ 1000 ಗಿಡಗಳನ್ನ ನೆಡುವ ಮೂಲಕ ವಿಶೇಷವಾಗಿ ಜನ್ಮ ದಿನ ಆಚರಣೆ ಮಾಡಲಾಗಿದೆ.

ಡಾ.ಶಾಮ ಪ್ರಸಾದ್ ಮುಖರ್ಜಿ ಯವರ ಬಲಿದಾನ ಮತ್ತು ಜನ್ಮ ದಿನದ ನಿಮಿತ್ಯವಾಗಿ ಜಿಲ್ಲೆಯಲ್ಲಿ ವಿವಿಧ ಮತಕ್ಷೇತ್ರದಲ್ಲಿ ಜುಲೈ 6 ರವರೆಗೆ ಗಿಡ ನೆಡುವ ಮೂಲಕ ಕಾರ್ಯಕ್ರಮ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಎಸ್ಸಿ ಕಾರ್ಯಕಾರಣಿ ಸದಸ್ಯ ಪೃಥ್ವಿ ಸಿಂಗ್ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ರಾವ ಬಹುದೂರ ಕದಂ,ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರಕಾರಣಿ ಸದಸ್ಯ ಪೃಥ್ವಿ ಸಿಂಗ್,ಎಸ್ಸಿ ಘಟಕದ ಜಿಲ್ಲಾ ಅಧ್ಯಕ್ಷ ಯಲ್ಲೇಶ ಕೋಲಕಾರ್, ಜಿಲ್ಲಾ ಸಂಚಾಲಕ ರಮೇಶ್ ಹರಿಜನ್,ಸವದತ್ತಿ ಮಂಡಲದ ಅಧ್ಯಕ್ಷ ಎಸ್ ಸಿ ಮೋರ್ಚಾ ಶ್ರೀ ಕಳಸಣ್ಣವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು










