ಕ್ರೂಸರ್ ಅಪಘಾತ: ಪರಿಹಾರ ಘೋಷಿಸಿದ‌ ಮುಖ್ಯಮಂತ್ರಿ

ಬೆಳಗಾವಿ: ಕ್ರೂಸರ್ ಪಲ್ಟಿಯಾಗಿ ಮೃತಪಟ್ಟ ಕುಟುಂಬಸ್ಥರಿಗೆ ಸರಕಾರದಿಂದ 5 ಲಕ್ಷ ಹಾಗೂ ಜಿಲ್ಲಾಧಿಕಾರಿ 2 ಲಕ್ಷ ರೂ. ಪರಿಹಾರ ಕೊಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

promotions

ಭಾನುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಗೋಕಾಕ‌ ತಾಲೂಕಿನ ಅಕ್ಕತೆಂಗೇರಹಾಳ ಗ್ರಾಮದ ಕಾರ್ಮಿಕರು ಕೆಲಸಕ್ಕೆ ತೆರಳುವಾಗ ನಡೆದ ಅಪಘಾತ ಅತ್ಯಂತ ದುಃಖಕರ ಸಂಗತಿ. ದೊಡ್ಡ ಪ್ರಮಾಣದಲ್ಲಿ ಅನಾಹುತವಾಗಿದೆ. ಅದರಲ್ಲಿ ಅಧಿಕೃತವಾಗಿ ಏಳು ಜನ ಮೃತಪಟ್ಟಿದ್ದಾರೆ. ಕೆಲವರು ಗಾಯಾಳುಗಳಾಗಿದ್ದಾರೆ‌. ಗಾಯಾಳಯಗಳಿಗೆ ಚಿಕಿತ್ಸೆ ಕೊಡಲು ಆದೇಶ ಮಾಡಿದ್ದೇ‌ನೆ ಎಂದರು.

promotions

Read More Articles