ಸರಕಾರದ ಸೌಲಭ್ಯ ಬುಡಕಟ್ಟು ಜನಾಂಗ ಪಡೆದುಕೊಳ್ಳಬೇಕು: ಪ್ರೊ. ಮೇತ್ರಿ

ಬೆಳಗಾವಿ: ಸರಕಾರದ ಸೌಲಭ್ಯವನ್ನು ಬುಡಕಟ್ಟು ಜನಾಂಗದವರು ಪಡೆದುಕೊಳ್ಳಬೇಕೆಂದು ಕನ್ನಡ ವಿಶ್ವವಿದ್ಯಾಲಯ ಹಂಪಿ ಬುಡಕಟ್ಟು ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಕೆ.ಎಂ. ಮೇತ್ರಿ ಹೇಳಿದರು.

promotions

ಈಚೇಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಸಮಾಜಕಾರ್ಯ ವಿಭಾಗವು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ಬುಡಕಟ್ಟು ಎಂದರೇನು? ಬುಡಕಟ್ಟು ಜನಾಂಗದವರು ಯಾವ ರೀತಿ ಇರುತಾರೇ. ಬುಡಕಟ್ಟು ಜನಾಂಗದವರು ಯಾವ ರೀತಿಯ ವೃತ್ತಿಯನ್ನು ಮಾಡುತ್ತಾರೆ ಅವರ ವೇಷಭೂಷಣ ಹೇಗಿರುತ್ತೆ ಅವರ ಆಚಾರ-ವಿಚಾರ ಉಡುಗೆ-ತೊಡುಗೆ ಹೇಗಿರುತ್ತೆ ಮತ್ತು ಅವರಿಗಾಗಿ ನಮ್ಮ ಭಾರತ ಸರ್ಕಾರದಿಂದ ಸಿಗುವ ಸೌಲಭ್ಯಗಳು ಯಾವುವು ಮತ್ತು ಅವರಿಗಾಗಿರುವ ಹಕ್ಕುಗಳು ಯಾವುವು ಮತ್ತು ಅವರ ಅಭಿವೃದ್ಧಿಗಾಗಿ ಇರುವ ಯೋಜನೆಗಳು ಯಾವುವು ಎಂದು ಮನವರಿಕೆ ಮಾಡಿಕೊಟ್ಟರು. ಮಾನವ ಕೂಡ ಒಂದು ಪ್ರಾಣಿ ಆದರೆ ಸಮಾಜ ಪ್ರಾಣಿ ಎಂದು ಇತ್ಯಾದಿ ಮಾಹಿತಿಗಳನ್ನು ವಿಶೇಷ ಉಪನ್ಯಾಸದಲ್ಲಿ ತಿಳಿಸಿಕೊಟ್ಟರು.

promotions

 

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರು ಡಾ ಅಶೋಕ್ ಡಿಸೋಜಾ, ಡಾ. ಸಂತೋಷ್ ಪಾಟೀಲ್, ಎಸ್. ಎಸ್. ಬಿದರಲ್ಲಿ ಸಹಾಯಕ ಪ್ರಾಧ್ಯಾಪಕರು ಸಮಾಜಕಾರ್ಯ ವಿಭಾಗ ಸಂಪನ್ಮೂಲ ವ್ಯಕ್ತಿಗಳ ಕುರಿತು ಪರಿಚಯ ಹೇಳಿದರು. ಡಾ. ದೇವತಾ ಘಸ್ತಿ, ಪ್ರೊ ಚಂದ್ರಿಕಾ, ಮಂಜುಳಾ, ಕಿರಣ ಎಸ್. ಪಲ್ಲವಿ ಬಡಿಗೇರ ಉಪಸ್ಥಿತರಿದ್ದರು. ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಮಾಜಕಾರ್ಯ ವಿಭಾಗದ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಮತ್ತು ಸಮಾಜಶಾಸ್ತ್ರ ವಿಭಾಗದ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಜಲ್ ಕಾಂಬ್ಳೆ ಸ್ವಾಗತಿಸಿದರು. ಮುತ್ತುರಾಜ್ ಮುದುಗಲ್ ವಂದಿಸಿದರು.ಸುಗಂಧಾ ಅಳ್ಳಟ್ಟಿ ನಿರೂಪಣೆ ಮಾಡಿದರು. ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಿದವರು ಸಮಾಜ ಕಾರ್ಯ ವಿಭಾಗದ ಸಮುದಾಯ ಅಭಿವೃದ್ಧಿ ಎಲ್ಲ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

Read More Articles