ಕುಡಿಯುವ ನೀರಿನ ಯೋಜನೆಗಳ ಸದ್ಬಳಕೆಯಾಗಲಿ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ: ಗ್ರಾಮೀಣ ಭಾಗದಲ್ಲಿ ಯಾವುದೇ ಮೂಲಸೌಕರ್ಯದ ಕೊರತೆಯಿಂದ ನಾಗರಿಕರಿಗೆ ತೊಂದರೆಯಾಗದಂತೆ  ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ಬೆಳಗಾವಿ  ಗ್ರಾಮೀಣ  ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. 

promotions

ಅವರು, ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುತ್ನಾಳ ಗ್ರಾಮಕ್ಕೆ 82.20 ಲಕ್ಷ ರೂ. ಅನುದಾನದಲ್ಲಿ ಮತ್ತು ಅರಳಿಕಟ್ಟಿ ಗ್ರಾಮಕ್ಕೆ ಜಲಜೀವನ್ ಮಿಷನ್ ಯೋಜನೆಯಡಿ ಮಂಜೂರಾದ  92.11 ಲಕ್ಷ ರೂ. ಅನುದಾನದಲ್ಲಿ ಕುಡಿಯುವ ನೀರಿನ ಕಾಮಗಾರಿಗಳಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು. 

promotions

ಜನರ ಆರೋಗ್ಯದ ರಕ್ಷಣೆ ದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಈ ಯೋಜನೆಯನ್ನು ಸ್ಥಳೀಯ ನಾಗರಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

 ಮುತ್ನಾಳ ಕೇದಾರ ಶಾಖಾಪೀಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  

 ಗ್ರಾಮದ ಹಿರಿಯರು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗವ್ವ ಕುರಬರ, ರುದ್ರಗೌಡ ಹುಬ್ಬಳ್ಳಿ, ನೀಲಮ್ಮ ಮರಲಕ್ಕನವರ, ಈರನಗೌಡ ಪಾಟೀಲ, ಮಹಾದೇವಿ ಅರಳೀಕಟ್ಟಿ, ರೇಣುಕಾ ತಳವಾರ, ಪಿಡಿಓ ಹಾಗೂ ಪಕ್ಷದ ಕಾರ್ಯಕರ್ತರು, ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

 ಅರಳೀಕಟ್ಟಿ ಗ್ರಾಮಕ್ಕೆ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ 92.11 ಲಕ್ಷ ರೂ,ಗಳ  ಕುಡಿಯುವ ನೀರಿನ ಕಾಮಗಾರಿಗಳಿಗೆ  ಲಕ್ಷ್ಮೀ ಹೆಬ್ಬಾಳಕರ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಪಿಡಿಓ ರಂಜಿತ ರಜಪೂತ, ಸಿದ್ದಪ್ಪ ಸಿಂಗಾಡಿ, ಚಂಬಣ್ಣ ಉಳ್ಳಾಗಡ್ಡಿ, ನಾಗಪ್ಪ ಅಂಗಡಿ, ಪಾರವ್ವ ಉದ್ದಾರ, ಚಂದ್ರವ್ವ ಕಟ್ಟಿಮನಿ, ಎಚ್ ವಿ ಕರಲಿಂಗಣ್ಣವರ, ಶಂಕರ ಯಳ್ಳೂರ, ಗುರಪ್ಪ ಹೆಬ್ಬಾಳಕರ್, ಆಂಜನೇಯ ಕಡತಾಳ, ಮಹಾಂತೇಶ ಸಂಗೊಳ್ಳಿ, ಮಂಜು ಹುಕ್ಕೇರಿ, ನಾಗಪ್ಪ ಕರಲಿಂಗಣ್ಣವರ, ಸಂತೋಷ್ ಉಪ್ಪಾರ, ಅಡಿವೆಪ್ಪ ಕರಲಿಂಗಣ್ಣವರ, ಬಸು ಸಿಂಗಾಡಿ, ಜಗದೀಶ ಯಳ್ಳೂರ, ಸಂತೋಷ ಉಪ್ಪಾರ, ಮಲ್ಲಪ್ಪ ಹರಿಜನ ಹಾಗೂ ಗ್ರಾಮದ ಪ್ರಮುಖ ಉಪಸ್ಥಿತರಿದ್ದರು.

Read More Articles