ವಿವಿಧ ಬೇಡಿಕೆ ಈಡೇರಿಸುವಂತೆ ಪೌರ ಕಾರ್ಮಿಕರ ಒತ್ತಾಯ

ಬೆಳಗಾವಿ :ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ಸಫಾಯಿ ಕರ್ಮಚಾಯಿ ಕಾವಲು ಸಮಿತಿ ಜಿಲ್ಲಾ ಘಟಕ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು.

promotions

ಬೆಳಗಾವಿ ಪಾಲಿಕೆ ಹದ್ದಿನಲ್ಲಿರುವ ಕಳೆದ 2005-06ರಲ್ಲಿ ಜಿಲ್ಲಾಧಿಕಾರಿಗಳು, ಪಾಲಿಕೆ ಆಡಳಿತಾಧಿಕಾರಿ ಒಪ್ಪಿಗೆ ಪಡೆದಿರುವಂತೆ 1973ರ ಬಳಿಕ ರಾಜ್ಯದ ಇನ್ನಿತರ ಜಿಲ್ಲೆಗಳಲ್ಲಿಯೂ ನಿವೇಶನ ಹಕ್ಕು ಪತ್ರ ನೀಡಿರುವಂತೆ ಬೆಳಗಾವಿ ಮಹಾನಗರ ಪಾಲಿಕೆಯ ವಾಸಿಸುತ್ತಿರುವ ನಮಗೆ ಮನೆಗಳ ಮಾರುಕಟ್ಟೆ ದರ ಆಕರಿಸಿ ಹಕ್ಕು ಪತ್ರಗಳನ್ನು ನೀಡಬೇಕೆಂದು ಆಗ್ರಹಿಸಿದರು.

promotions

ಕಳೆದ 2004 ಹಾಗೂ 2006ರಲ್ಲಿ ಜಿಲ್ಲೆಯಲ್ಲಿ ನಡೆಸಲಾಗಿದ್ದ ಮಾನ್ಯುವಲ್ ಸ್ಕೆವೆಂಜರ್ ಗಳ ಸಮೀಕ್ಷೆಯಲ್ಲಿ ಗುರುತಿಸಲ್ಪಟ್ಟ 543 ಕುಟುಂಬಗಳಿಗೆ 16 ವರ್ಷಗಳಿಂದ ಗುರುತಿನ‌ ಚೀಟಿ ನೀಡಿಲ್ಲ. 2020ರಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ನ.2020ರಲ್ಲಿ ಮರು ಸಮೀಕ್ಷೆ ನಡೆಸಿ ಗುರುತಿಸಲ್ಪಟ್ಟ 396 ಎಂ.ಎಸ್ ಕುಟುಂಬಗಳಿಗೆ ಗುರುತಿನ ಚೀಟಿ ನೀಡಬೇಕೆಂದು ಒತ್ತಾಯಿಸಿದರು.

ಕಳೆದ ಮಾಚ್೯ನಲ್ಲಿ ನಡೆದ ಜಿಲ್ಲಾ ಮಟ್ಟದ ಉಸ್ತುವಾರಿ ಸಭೆಯಲ್ಲಿ ಒಂದು ತಿಂಗಳ ಒಳಗಾಗಿ ಹೊರಡಿಸಿದ ನೇಮಕಾತಿ ಅಧಿಸೂಚನೆ ಅನ್ವಯ 155 ಒಳಗುತ್ತಿಗೆ ಪೌರಕಾರ್ಮಿಕರನ್ನು, ನಿಪ್ಪಾಣಿಯಲ್ಲಿ 54, ಗೋಕಾಕನಲ್ಲಿ 51, ಬೈಲಹೊಂಗಲ 59, ಸವದತ್ತಿ 57, ರಾಮದುರ್ಗ 37, ಮೂಡಲಗಿ 36,ಅಥಣಿ 30, ಚಿಕ್ಕೋಡಿ 36, ಕೊಣ್ಣೂರು 44, ಸದಲಗಾ 28, ಕುಡಚಿ, ಖಾನಾಪುರ ಸೇರಿದಂತೆ ಇನ್ನಿತರರ ಕಡೆಯಲ್ಲಿ ಪೌರಕಾರ್ಮಿಕರನ್ನು ಖಾಯಂ ಮಾಡಬೇಕೆಂದು ಪ್ರತಿಭಟನಾಕರರು ಆಗ್ರಹಿಸಿದರು.

Read More Articles