ಬೆಳಗಾವಿಗೆ ಆಗಮಿಸಿದ ಕೇದಾರ ಜಗದ್ಗುರುಗಳನ್ನು ಗೌರವಿಸಿದ ಗುರುವಿರಕ್ತರು

ಬೆಳಗಾವಿ: ಬೆಳಗಾವಿ ‌ನಗರಕ್ಕೆ ಶ್ರೀ ಕೇದಾರ ಜಗದ್ಗುರು, ರಾವಲ್ ಪದವಿ ವಿಭೂಷಿತ ಭೀಮಾಶಂಕರಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಬುಧವಾರ ಆಗಮಿಸಿದ್ದರು.

promotions

ಈ ಸಂದರ್ಭದಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ, ಕೇದಾರ ಜಗದ್ಗುರುಗಳನ್ನು ಗೌರವಿಸಿ ಜಗದ್ಗುರುಗಳ ಕಾರ್ಯದ ಬಗ್ಗೆ ಅಭಿಮಾನದಿಂದ ಗುರುಗೌರವವನ್ನು ಸಮರ್ಪಿಸಿದರು.

promotions

ಆಶೀರ್ವಾದ ಮಾಡಿ ಮಾತನಾಡಿದ ಕೇದಾರ ಜಗದ್ಗುರುಗಳ, ಬೆಳಗಾವಿ ನಗರದಲ್ಲಿ ಗುರುವಿರಕ್ತರು ಸೇರಿ ನಮಗೆ ಗೌರವಿಸಿದ್ದು ಸಂತಸ ತಂದಿದೆ . ಇನ್ನೂ ಹೆಚ್ಚಿನ ಧಾರ್ಮಿಕ, ಸಾಮಾಜಿಕ ಕಾರ್ಯವನ್ನು ಈ ಭಾಗದಲ್ಲಿ ಉಭಯ ಸ್ವಾಮೀಜಿಗಳು ಮಾಡಲಿ ಎಂದು ಆಶೀರ್ವದಿಸಿದರು. ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿ ಮಾತನಾಡಿ, ಕೇದಾರ ಜಗದ್ಗುರುಗಳಿಗೂ ನಮಗೂ ತುಂಬಾ ವರ್ಷಗಳಿಂದ ನಿಕಟ ಸಂಪರ್ಕವಿದೆ. ಇವತ್ತು ಕೇದಾರ ಪೀಠದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವುದು ಸಂತಸ ತಂದಿದೆ ಎಂದರು.

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೇದಾರ ಜಗದ್ಗುರುಗಳು ಬೆಳಗಾವಿಗೆ ಪಂಚಾಕ್ಷರಿ ಹಿರೇಮಠ ಅವರ ಮನೆಗೆ ಬಂದಿರುವುದು ಸಂತಸದ ಸಂಗತಿ. ಅವರಿಂದ ಬೆಳಗಾವಿ ನಗರದ ಜನತೆಗೆ ದರ್ಶನ ಲಭಿಸಿದಂಯಾಗಿದೆ. ಕೇದಾರ ಜಗದ್ಗುರುಗಳ ಕಾರ್ಯ ಅನುಪಮ. ಗಂಗಾಧರ ಜಗದ್ಗುರುಗಳ ನಂತರದಲ್ಲಿ ವೈಭವ ಪೂಜೆಯನ್ನು ನೋಡಬೇಕೆಂದರೆ ಕೇದಾರ ಜಗದ್ಗುರುಗಳನ್ನು ನೋಡಬಹುದು ಎಂದರು.

ಕನ್ವಕುಪ್ಪಿ ಮಠದ ಡಾ. ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹುಕ್ಕೇರಿ ಹಿರೇಮಠದ ಶ್ರೀಗಳು ಎಂದರೆ ನಂದಿ ಇದ್ದ ಹಾಗೆ. ಅವರು ಎಲ್ಲಾ ಗುರುಗಳಿಗೂ ವಿಶೇಷ ಗೌರವ ಸಲ್ಲಿಸುತ್ತಾ ತಮ್ಮ ಶೃದ್ದೆಯನ್ನು ಮೆರೆದಿದ್ದಾರೆ ಎಂದರು.

ಮುತ್ನಾಳ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಅಲ್ಪಸಂಖ್ಯಾತ ನಿಮಗ ಮಂಡಳಿ ಅಧ್ಯಕ್ಷ ಮುಕ್ತಾರ ಪಠಾಣ, ಮಹಾಂತೇಶ ಹಿರೇಮಠ, ಪಂಚಾಕ್ಷರಿ ಹಿರೇಮಠ, ವಿಜಯ ಶಾಸ್ತ್ರೀ ಉದೋಸಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read More Articles