ಬಿಜೆಪಿ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ SDPI

ಬೆಳಗಾವಿ :ರಾಜ್ಯದಲ್ಲಿ ಅಲ್ಪಸಂಖ್ಯಾತರು, ಕ್ರಿಶ್ಚಿಯನ್, ದಲಿತರ ಮೇಲೆ ಬಿಜೆಪಿ ಸರಕಾರ ಮಾಡುತ್ತಿರುವ ದಬ್ಬಾಳಿಕೆಯ ವಿರುದ್ಧ ಎಸ್ ಡಿಪಿಐ ಸಂಘಟನೆಯ ಸಲೀಂ ಖಾನ ವಾಗ್ದಾಳಿ ನಡೆಸಿದರು. ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರಕಾರ ಎಲ್ಲ ಸಮುದಾಯವನ್ನು ಒಗ್ಗೂಡಿಸಿಕೊಂಡು ಹೋಗುವುದು, ಆಡಳಿತ, ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲವಾಗಿದೆ.

promotions

ಅಲ್ಪಸಂಖ್ಯಾತರು, ದಲಿತರು, ಕ್ರಿಶ್ಚಿಯನ್ ರ ಮೇಲೆ ನಿರಂತರವಾಗಿ ಹಲ್ಲೆಯಾಗುತ್ತಿದ್ದರೂ ಇದಕ್ಕೆ ಕೋಮುವಾದ ಸೃಷ್ಟಿಸಿ ನಾಲ್ಕು ವರ್ಷದಲ್ಲಿ ಗಲಾಟೆ ಮಾಡಿಸುವುದೇ ದೊಡ್ಡ ಸಾಧನೆಯಾಗಿದೆ.
 

promotions

ಈ ಕುರಿತು ಬಿಜೆಪಿ‌ ‌ಅರಾಜಕತೆಯ ಕುರಿತು ಪುಸ್ತಕ ಬಿಡುಗಡೆ ಮಾಡಿದ್ದೇವೆ ಎಂದರು. ಖಾನಾಪುರ ತಾಲೂಕಿನ ಅರ್ಬಾಜ್ ಖಾನ ಕೊಲೆ ಪ್ರಕರಣವನ್ನು ಉನ್ನತ ತನಿಖಾ ತಂಡ ರಚನೆ ಮಾಡಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

Read More Articles