ಜನೇವರಿಯಿಂದ ಪಕ್ಷಾಂತರ ಪರ್ವ ಆರಂಭ: ಸತೀಶ ಜಾರಕಿಹೊಳಿ

ಬೆಳಗಾವಿ :ರಾಜ್ಯ ರಾಜಕಾರಣದಲ್ಲಿ ಜನವರಿಯಿಂದ ಪಕ್ಷಾಂತರ ಪರ್ವ ಆರಂಭವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ಪ್ರಭಾವಿ ಲಿಂಗಾಯತ ಲೀಡರ್ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಉತ್ತರಿಸಿದ ಅವರು, ಜನವರಿಯಿಂದ ಪಕ್ಷಾಂತರ ಪರ್ವ ಆರಂಭ ಆಗಲಿದೆ.

promotions

ಆ ಕಡೆಯಿಂದ ಈ ಕಡೆ ಈ ಕಡೆಯಿಂದ ಆ ಕಡೆ ಆರಂಭವಾಗಲಿದೆ.ಜನವರಿಯಲ್ಲಿ ಖಂಡಿತವಾಗಿ ಪಕ್ಷಾಂತರ ಪರ್ವ ಆರಂಭ ಆಗಲಿದೆ ಎಂದರು. ಒಮ್ಮೊಮ್ಮೆ ಬುಕ್ಕಿಂಗ್ ಮಾಡ್ತಾರೆ ಕೊನೆ ಕ್ಷಣದಲ್ಲಿ ಕ್ಯಾನ್ಸಲ್ ಮಾಡ್ತಾರೆ. ರಾಜಕೀಯ ಅಂದ್ರೆ ಹಿಂಗೆ ಅಂತಾ ಹೇಳಲಿಕ್ಕೆ ಆಗಲ್ಲ. ಕೆಲವೊಮ್ಮೆ ಆನ್ ಲೈನ್ ಬುಕ್ಕಿಂಗ್ ಸಹ ಆಗುತ್ತದೆ, ಕ್ಯಾನ್ಸಲ್ ಆಗುತ್ತದೆ ಎಂದರು.

promotions

ಪ್ರಭಾಕರ ಕೋರೆ ಕಾಂಗ್ರೆಸ್ ಸೇರ್ಪಡೆ ವಿಚಾರ ಬಿಜೆಪಿ ಬೇರೆಬೇರೆ ಗುಂಪಿನಲ್ಲಿ ಚರ್ಚೆ ಆಗ್ತಿದೆ.ನಾವು ಬಿಜೆಪಿಯಲ್ಲಿ ಇರಬೇಕಾ, ಬೇರೆ ಪಕ್ಷಕ್ಕೆ ಹೋಗಬೇಕಾ ಅಂತಾ. ಅದು ಬಿಜೆಪಿ ಪಕ್ಷ ಅಷ್ಟೇ ಅಲ್ಲ ಎಲ್ಲಾ ಪಕ್ಷದಲ್ಲೂ ಪಕ್ಷಾಂತರ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಎಲ್ಲಾ ಪಕ್ಷದಲ್ಲೂ ತಮ್ಮ ತಮ್ಮ ಸ್ಥಾನ ಮಾನ ಗಟ್ಟಿ ಮಾಡಲು ಚರ್ಚೆ ಮಾಡುತ್ತಲೇ ಇರ್ತಾರೆ. ಅಂತಿಮ ನಿರ್ಧಾರ ಅವರಿಗೆ ಬಿಟ್ಟಿರುವುದು ಎಂದರು‌. ಬಿಜೆಪಿಯವರು ಯಡಿಯೂರಪ್ಪ ಅವರನ್ನ ಕಡೆಗಣಿಸಿದ್ದಾರೆ ‌ಅವರನ್ನ ಸೈಡ್ ಲೈನ್ ಮಾಡಿದ್ರು ಈಗ ಅವರ ಮಕ್ಕಳು ಇಲ್ಲ.‌ಮುಂದಿನ ಚುನಾವಣೆಯಲ್ಲಿ ಪೂರ್ತಿ ಯಡಿಯೂರಪ್ಪ ಕುಟುಂಬವನ್ನ ಸೈಡ್ ಮಾಡ್ತಾರೆ ಎಂದರು.

ಕಾಂಗ್ರೆಸ್ ಪ್ರಣಾಳಿಕೆ ಯಲ್ಲಿ ಪಂಚಮಸಾಲಿ ಮೀಸಲಾತಿ ಸೇರಿಸುವ ವಿಚಾರ ಇನ್ನೂ ಕಾಂಗ್ರೆಸ್ ಪ್ರಣಾಳಿಕೆ ಜನೆವರಿ, ಫೆಬ್ರವರಿ ಅಲ್ಲಿ ಅಂತಿಮ ಆಗುತ್ತದೆ. ಅವಾಗ ಪಾರ್ಟಿಯವರು ಅದನ್ನ ಹಾಕಬೇಕಾ, ಹಾಕಬಾರದಾ ಅನ್ನೋದು ತೀರ್ಮಾನ ಮಾಡ್ತಾರೆ. ಸ್ವಾಭಾವಿಕವಾಗಿ ರಾಜಕೀಯ ಲಾಭ ಪಡೆಯಲು ಎಲ್ಲಾ ಪಕ್ಷಗಳು ಪ್ರಯತ್ನ ಮಾಡುತ್ತೇವೆ.

ಮುಂಚಿತವಾಗಿಯೇ ಏನು ಹೇಳಲು ಆಗುವುದಿಲ್ಲ ಎಂದರು. ಮಳೆಗಾಲ ನಿಂತ ಮೇಲೆ ಎಲ್ಲವೂ ಈಗ ಮಳೆಗಾಲದಲ್ಲಿ ಏನು ಇಲ್ಲ ಎಂದು ಮಾರ್ಮಿಕವಾಗಿ ಹೇಳಿದ ಸತೀಶ್ ಜಾರಕಿಹೊಳಿ

Read More Articles