ಮುಚ್ಚುವ ಹಂತಕ್ಕೆ ತಲುಪಿದ ಇಂದಿರಾ ಕ್ಯಾಂಟೀನ್..?

ಬೆಳಗಾವಿ: ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಬಡವರ ಹಸಿವು ತೀರಿಸಲು ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ಗಳು ಈಗ ಅನುದಾನದ ಕೊರತೆಯಿಂದಾಗಿ ಕೀಲಿ ಹಾಕುವ ಪರಿಸ್ಥಿತಿ ಎದುರಾಗಿದೆ. ಬೆಳಗಾವಿಯ ಇಂದಿರಾ ಕ್ಯಾಂಟೀನ್‌ಗೆ ಪ್ರತಿ ದಿನಕ್ಕೆ ಒಂದು ಲಕ್ಷ ರು. ವೆಚ್ಚವಾಗುತ್ತಿದ್ದು, ಇದು ಮಹಾನಗರ ಪಾಲಿಕೆಗೆ ಹೊರೆಯಾಗುತ್ತಿದೆ.

promotions

ಬೆಳಗಾವಿ ನಗರದಲ್ಲಿ ಆರು ಇಂದೀರಾ ಕ್ಯಾಂಟೀನ್‌ಗಳಿವೆ ಇದಕ್ಕೆ ಪ್ರತಿನಿತ್ಯ ಒಂದು ಲಕ್ಷ ರು. ಖರ್ಚಾಗುತ್ತಿದೆ. ಇದನ್ನು ಮಹಾನಗರ ಪಾಲಿಕೆಯೇ ಪಾವತಿ ಮಾಡುತ್ತಿದೆ. ಸರಕಾರ ಕ್ಯಾಂಟೀನ್‌ಗಳ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡದೆ ಇರುವುದರಿಂದ ಮಹಾನಗರ ಪಾಲಿಕೆ ಪರದಾಡುವಂತಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಕ್ಯಾಂಟೀನ್‌ಗಳಿಗೆ ಸಂಕಷ್ಟ ಎದುರಾಗಲಿದೆ.

promotions

ನಗರದಲ್ಲಿ ಸುಮಾರ 10 ಲಕ್ಷ ಜನಸಂಖ್ಯೆ ಇದೆ. ಜನಬೀಡ ಪ್ರದೇಶದಲ್ಲಿ ಕ್ಯಾಂಟೀನ್‌ಗಳನ್ನು ತೆರೆಯಲಾಗಿದೆ. ತರಕಾರಿ ಮಾರುಕಟ್ಟೆ, ಎಪಿಎಂಸಿ ರಸ್ತೆ, ಜಿಲ್ಲಾಸ್ಪತ್ರೆ, ರುಕ್ಷö್ಮಣಿ ನಗರ, ಬಾಜಿ ಮಾರ್ಕೇಟ್ ಮತ್ತು ನಾಥಪೈ ರಸ್ತೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರು ಇಂದಿರಾ ಕ್ಯಾಂಟೀನ್‌ನ್ನು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿರುವ ಬಿಜೆಪಿ ಸರಕಾರ ಇಂದಿರಾ ಕ್ಯಾಂಟೀನ್‌ಗಳಿಗೆ ಅನುದಾನ ಬಿಡುಗಡೆ ಮಾಡದೆ ಇರುವುದರಿಂದ ಕ್ಯಾಂಟೀನ್‌ಗಳ ನಿರ್ವಹಣೆ ಪಾಲಿಕೆಗೆ ತಲೆನೋವಾಗಿದೆ.

Read More Articles