ಹರಮುನಿದರು ಗುರು ಕಾಯವ - ಶ್ರೀ ಲಕ್ಷ್ಮೀನಾರಾಯಣ ಗುರೂಜಿ

ಹುಕ್ಕೇರಿ : ನಗರದ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳಿಗೆ 108 ಕಲಶಗಳಿಂದ ಮಸ್ತಕಾಭಿಷೇಕ ಹಾಗೂ ಪಾದಪೂಜೆ ಕಾರ್ಯಕ್ರಮದಲ್ಲಿ ಮುದ್ರಾ ಶಿರೋಮಣಿ ಶ್ರೀ ಡಾಕ್ಟರ್ ಲಕ್ಷ್ಮೀನಾರಾಯಣ ಗುರೂಜಿ ಬೆಂಗಳೂರು ಅವರು ಹರ ಮುನಿದರೆ ಗುರು ಕಾಯವ ಕಲಿಯುಗದಲ್ಲಿ ಹತ್ತು ಹಲವಾರು ವಿಘ್ನಗಳನ್ನು ಪರಿಹರಿಸುವ ಶಕ್ತಿ ಗುರುವಿನಲ್ಲಿರುತ್ತದೆ ಎಂದರು.

promotions

ನಂತರ ಮಾತನಾಡಿದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಪೌರ್ಣಮಿಯ ದಿನದಂದು ನಮ್ಮ ಭಕ್ತವೃಂದ ವಿಶೇಷ ಮಹಾಮಸ್ತಕಾಭಿಷೇಕ ಮಾಡಿರುವುದು ವಿಶೇಷ ಗುರು ಪೌರ್ಣಮಿಯ ದಿನದಂದು ಎಲ್ಲರಿಗೂ ಒಳಿತಾಗಲಿ ಎಂದರು .

promotions

ಹುಕ್ಕೇರಿ ಹಿರೇಮಠದ ಗುರುಕುಲದ ಮುಖ್ಯೋಪಾಧ್ಯಾಯರಾದ ಶ್ರೀ ಸಂಪತ್ತಕುಮಾರ ಶಾಸ್ತ್ರಿಗಳು ಬೆಳಗಾವಿ ನಗರದ ಶ್ರೀ ಚಂದ್ರಶೇಖರ ಶಾಸ್ತ್ರಿಗಳು ಹಾಗೂ ಗುರುಕುಲದ 108 ವೇದವಟುಗಳು ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳಿಗೆ ರುದ್ರಪಾರಾಯಣದ ಮೂಲಕ 108 ವನಸ್ಪತಿಗಹಿಂದ ಮಸ್ತಕಾಭಿಷೇಕ ಹಾಗೂ ಪಾದಪೂಜೆ ನೆರವೆರಿಸಿದರು ಇ ಸಂದರ್ಭದಲ್ಲಿ ಮಹಾವಿರ ಉದ್ಯೋಗ ಸಮೂಹ ಸಂಸ್ಥೆಗಳ ಅಧ್ಯಕ್ಷರು ಪುರಸಭೆ ಸದಸ್ಯರಾದ ಮಹಾವಿರ ನಿಲಜಗಿ,ಹೋಳೆಮ್ಮದೇವಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಎಚ್ ಎಲ್ ಪೂಜಾರಿ ಅವರು ಶ್ರೀ ಗಳ ಪಾದಪೂಜೆ ನೆರವೆರಿಸಿದರು.

ಇ ಸಂದರ್ಭದಲ್ಲಿ ಹುಕ್ಕೇರಿ ವಕಿಲರ ಸಂಘದ ಅಧ್ಯಕ್ಷರಾದ ಶ್ರೀ ಆರ್ ಪಿ ಚೌಗಲಾ, ಹಿರಾಸುಗರ ಕಾರ್ಖಾನೆಯ ಎಮ್ ಡಿ ಕರ್ಕಿನಾಯಕ ,ಶ್ರೀ ಅಶೋಕ ಪಟ್ಟಣಶೆಟ್ಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕ ಘಟಕದ ಅಧ್ಯಕ್ಷರಾದ ರವೀಂದ್ರ ಕಾಂಬಳೆ ,ಪ್ರದಾನ ಕಾರ್ಯದರ್ಶಿಯಾದ ಮಹಾದೇವ ನಾಯಿಕ ಗೌರವಾಧ್ಯಕ್ಷರಾದ ಪಿ.ಜಿ ಕೊಣ್ಣೂರ, ಸಂಜೀವ ಮುತಾಲಿಕ ,ಸಚಿನ ಕಾಂಬಳೆ.ಮಲ್ಲಿಕಾರ್ಜುನ ಗುಂಡಕಲ್ಲಿ.ರಾಮಣ್ಣಾ ನಾಯಿಕ.ರಾಜು ಕುರಂದವಾಡೆ,ವಿಶ್ವನಾಥ ನಾಯಿಕ, ಆನಂದ ಬೊಮ್ಮನ್ನವರ, ಶಶಾಂಕ ಮಾಳಿ.ಸುರೇಶ ಕಿಲ್ಲೇದಾರ, ನೇಮಿನಾಥ ಸೊಲ್ಲಾಪುರೆ, ಪಠಾಣ್ , ಸುರೇಶ್ ದೊಡ್ಡಲಿಂಗನವರ , ಶ್ರೀ ಸುರೇಶ ಬೆಲ್ಲದ, ಶ್ರೀ ಬಸವರಾಜ ಮರಡಿ, ಶ್ರೀ ಸೋಮನಾಥ ಅಂಬೊಳಿ, ಶ್ರೀ ಪ್ರಭುಗೌಡ ಪಾಟೀಲ, ಶ್ರೀ ಬಸವರಾಜ ಕಲ್ಲಟ್ಟಿ, ಶ್ರೀ ಗಳಿಂದ ಆಶಿರ್ವಾದ ಪಡೆದರು , ಸುರೇಶ್ ಜಿನರಾಳಿ,ಚನ್ನಪ್ಪಾ ಗಜಬರ , ವಿರಶೈವ ಮಹಾಸಭಾ ಯುವ ಘಟಕದ ಶಿತಲಕುಮಾರ ಬ್ಯಾಳಿ ಪ್ರಭು ವಂಟಮುರಿ ಶ್ರೀ ಶೈಲ ಮಠಪತಿ ಹಾಗೂ ಶ್ರೀ ಮಠದ ಸದ್ಭಕ್ತರು ಉಪಸ್ಥಿತರಿದ್ದರು.

Read More Articles