ಪ್ಲಾಸ್ಟಿಕ ಸರ್ಜರಿ ಉಚಿತ ತಪಾಸಣಾ ಶಿಬಿರ

ಬೆಳಗಾವಿ : ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಪ್ಲಾಸ್ಟಿಕ ಮತ್ತು ಮೈಕ್ರೊವೆಸ್ಕುö್ಯಲರ ವಿಭಾಗವು ವಿಶ್ವ ಪ್ಲಾಸ್ಟಿಕ ಮತ್ತು ರಿಕನ್ಸಟ್ರಕ್ಟಿವ ಶಸ್ತçಚಿಕಿತ್ಸಾ ದಿನಾಚರಣೆ ಅಂಗವಾಗಿ ದಿ. 15 ಜುಲೈ 2022ರಂದು ಬೆಳಗ್ಗೆ 10 ರಿಂದ ಸಂಜೆ 4ವರೆಗೆ ಆಸ್ಪತ್ರೆಯಲ್ಲಿ ತಲೆ, ಕತ್ತು ಬಾಯಿ ಕ್ಯಾನ್ಸರ ಶಸ್ತçಚಿಕಿತ್ಸೆಯಿಂದಾದ ಕಲೆ, ಬಹುದಿನಗಳಿಂದ ಮಾಯದ ಗಾಯ, ವೆರಿಕೋಸ್ ವೇನ್ಸ್, ಸುಟ್ಟ ಗಾಯದಿಂದಾದ ಚರ್ಮ ಮತ್ತು ಗಾಯಗಳ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.

promotions

ಜನ್ಮತಃವಾಗಿ ಮುಖದ ಸೌಂದರ‍್ಯ ಹಾಳಾಗಿದ್ದರೆ, ಕಿವಿ ಇಲ್ಲದಿರುವದು, ಸೀಳು ತುಟಿ ಸೇರಿದಂತೆ ಇನ್ನೀತರ ತೊಂದರೆಗಳನ್ನು ಅನುಭವಿಸುತ್ತಿದ್ದರೆ, ಈ ಶಿಬಿರದಲ್ಲಿ ತಜ್ಞವೈದ್ಯರು ಸಂಬಂಧಿಸಿದ ರೋಗಗಳನ್ನು ಪರೀಕ್ಷಿಸಿ ಸೂಕ್ತ ಸಲಹೆ ನೀಡಲಿದ್ದಾರೆ. ಆದ್ದರಿಂದ ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

promotions

Read More Articles