ಮಳೆಗೆ ಜಲಾವೃತಗೊಂಡ ಗಣೇಶ ಮಂದಿರ
- 15 Jan 2024 , 2:35 AM
- Belagavi
- 110
ಬೆಳಗಾವಿ :ಸತತವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಯಳ್ಳೂರ ರಸ್ತೆಯಲ್ಲಿರುವ ಗಣೇಶ ಮಂದಿರ ಸಂಪೂರ್ಣ ಜಲಾವೃಗೊಂಡಿದೆ. ಪಶ್ಚಿಮ ಘಟಕದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬೆಳಗಾವಿ ನಗರದಲ್ಲಿಯೂ ಹಲವು ಪ್ರದೇಶಗಳು ಜಲಾವೃತಗೊಂಡಿವೆ.

ಕೇವಲ ಮನೆಗಳಿಗೆ ನೀರು ನುಗ್ಗಿದ್ದಲ್ಲದೆ, ಗಣೇಶನ ಮಂದಿರಕ್ಕೂ ಜಲದಿಗ್ಬಂಧನ ಹಾಕಿರುವ ಹಿನ್ನೆಲೆಯಲ್ಲಿ ಭಕ್ತರು ದೂರದಿಂದ ನಿಂತು ಗಣೇಶನ ದರ್ಶನ ಪಡೆದುಕೊಂಡು ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.











