ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಅನೇಕ್ ಯೋಜನೆಗಳನ್ನು ಜಾರಿಗೆ ತಂದ್ ರಾಜ್ಯ ಸರ್ಕಾರ್

ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸರ್ವತೋಮುಖ ಅಭಿವೃದ್ಧಿಗಾಗಿ ಅನೇಕ ಜನಕಲ್ಯಾಣ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.

promotions

ಸ್ವಯಂ ಉದ್ಯೋಗ ಯೋಜನೆಗಳು
ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಂದ ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು:
1) ನೇರ ಸಾಲ: ಸಣ್ಣ ಆದಾಯಗಳಿಸುವ ಆರ್ಥಿಕ ಚಟುವಟಿಕೆಗಳಿಗಾಗಿ ಘಟಕ ವೆಚ್ಚ ಗರಿಷ್ಠ ರೂ. 1.00 ಲಕ್ಷಗಳು. ಇದರಲ್ಲಿ 50 ಸಾಲ & 50% ಸಹಾಯಧನ.
2)ಉದ್ಯಮಶಿಲತಾ ಅಭಿವೃದಿ ಯೋಜನೆ :
I)ಇ ವಿ ಮತ್ತು ದ್ವಿಚಕ್ರ ವಾಹನ ಖರೀದಿಗೆ ಗರಿಷ್ಠ ರೂ. 50,000/- ಸಹಾಯಧನ, ಉಳಿದ ಮೊತ್ತ ಬ್ಯಾಂಕ್ ಸಾಲವಾಗಿ ಪಡೆಯ ಬಹುದು .
ii) ಐ.ಎಸ್.ಬಿ ಚಟುವಟಿಕೆಗಳಿಗಾಗಿ ಸಹಾಯಧನ: ಗರಿಷ್ಠ ರೂ. 2.00 ಲಕ್ಷ, ಉಳಿದ ಮೊತ್ತ ಬ್ಯಾಂಕ್‌ ನಿಂದ ಸಾಲ,
iii) ಸರಕು ಸಾಗಾಣಿಕೆ ವಾಹನ: ಗರಿಷ್ಠ ರೂ. 3.50 ಲಕ್ಷ ಸಹಾಯಧನ, ಉಳಿದ ಮೊತ್ತ ಬ್ಯಾಂಕ್‌ ಸಾಲ.

promotions

ಮೈಕ್ರೋ ಕ್ರೆಡಿಟ್ ಯೋಜನೆ
ಮಹಿಳೆಯರಲ್ಲಿ ಗುಂಪು ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡಿ ಆದಾಯ ಗಳಿಸಲು ಅನುವಾಗುವಂತೆ ಕನಿಷ್ಠ 10 ಸದಸ್ಯರಿರುವ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಗರಿಷ್ಠ ರೂ. 2.50 ಲಕ್ಷಗಳನ್ನು ಮಂಜೂರು ಮಾಡಲಾಗುವುದು. ಇದರಲ್ಲಿ ರೂ. 1.50 ಲಕ್ಷ ಸಹಾಯ ಧನ ಮತ್ತು ರೂ. 1.00 ಲಕ್ಷ ಸಾಲದ್ ರೂಪದಲ್ಲಿ ನೀಡಲಾಗುವುದು.

ಭೂ ಒಡೆತನ ಯೋಜನೆ
ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಕನಿಷ್ಠ 0.20 ಎಕರೆ ಮೇಲ್ಪಟ್ಟು ಘಟಕ ವೆಚ್ಚದಲ್ಲಿ ಗರಿಷ್ಠ ಎಷ್ಟು ವಿಸ್ತೀರ್ಣ ಬರುತ್ತದೆಯೋ ಅಷ್ಟು ಜಮೀನನ್ನು ಖರೀದಿಸಿ ಕೊಡಲಾಗುವದು.

ಗಂಗಾ ಕಲ್ಯಾಣ್ ಯೋಜನೆ
ಸಣ್ಣ ಮತ್ತು ಅತೀ ಸಣ್ಣ ರೈತರು ಹೊಂದಿರುವ ಖುಷ್ಕಿ /ಒಣ ಜಮೀನಿನಲ್ಲಿ ಕೊಳವೆ ಭಾವಿ ಕೊರೆಸಿ ನೀರಾವರಿ ಸೌಲಭ್ಯ ಒದಗಿಸ ಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ್ 🗓: 20/08/2022

ಅರ್ಜಿ ಸಲ್ಲಿಸಬೇಕಾದ್ ವೆಬ್ಸೈಟ್ 🌎:suvidha karnataka .

ಏಸಿ ಎಸಟಿ ಸಹಾಯವಾಣಿ 📞 9482300400ಗೆ ಸಂಪರ್ಕಿಸಬಹುದು .

Read More Articles