ಪರೋಕ್ಷವಾಗಿ ಡಿಕೆಶಿ, ಸಿದ್ದುಗೆ ಟಾಂಗ್ ಕೊಟ್ಟ ಎಮ್ ಬಿ ಪಾಟೀಲ

ಬೆಳಗಾವಿ :ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿಕೆ. ಈ ಕೆಟ್ಟ ಬಿಜೆಪಿ ಸರ್ಕಾರ ತೊಲಗಬೇಕು. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ‌‌ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.

promotions

ಕಾಂಗ್ರೆಸ್ ಪಕ್ಷದವರಿಗೆ ಐಟಿ, ಇಡಿ, ಸಿಬಿಐ ದಾಳಿಯ ಭಯ ಇಲ್ಲ.ಕಾಂಗ್ರೆಸ್ ಪಕ್ಷದ ಸಿಎಂ ಸ್ಥಾನಕ್ಕೆ ಯಾವುದೇ ಕಿತ್ತಾಟ ಇಲ್ಲ. ರಾಹುಲ್ ಗಾಂಧಿಯವರು140 ಸೀಟ್ ಟಾರ್ಗೆಟ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರ 75 ನೇ ಜನ ದಿನಾಚರಣೆ ಒಂದು ಮೈಲುಗಲ್ಲು ಎಂದರು. ಸಿದ್ದರಾಮಯ್ಯ ಅವರು ಗ್ರಾಮೀಣದಿಂದ ಬಂದವರು, ಅವರು ಪಕ್ಷಾತೀತ ನಾಯಕರು.
 

promotions

ಕಾಂಗ್ರೆಸ್ ದಲ್ಲಿ ಮುಖ್ಯಮಂತ್ರಿ ಯಾರು ಆಗಬೇಕು ಅನ್ನೋದನ್ನ ಹೈಕಮಾಂಡ ನಿರ್ಧಾರ ಮಾಡುತ್ತದೆ. ಚುನಾವಣೆ ಬಳಿಕ ಗೆದ್ದು ಬಂದ ಶಾಸಕರು, ಆನಂತರ ಹೈಕಮಾಂಡ ನಿರ್ಧಾರ ಮಾಡಲಿದೆ ಎಂದರು. ಲಿಂಗಾಯತ, ದಲಿತ, ನಾಯಕ, ಒಕ್ಕಲಿಗ ಸಮಾಜದವರು ಸಿಎಂ ಆಗಬೇಕೆಂದು ಬಯಸುತ್ತಾರೆ.

 

ನಾನು ಬಯಸಿದ್ರೆ ಸಿಎಂ ಆಗಲ್ಲ. ಸಮಾಜ , ಪಕ್ಷ, ಶಾಸಕರು, ಹೈಕಮಾಂಡ ಬಯಸಿದ್ರೆ ಸಿಎಂ ಆಗ್ತಿನಿ. ಪಕ್ಷ ಬಿಟ್ಟ 17 ಜ‌ನ ಶಾಸಕರು ವಾಪಸ್ ಬರುವುದು, ಬಿಡುವ ಬಗ್ಗೆ ನನಗೆ ಗೊತ್ತಿಲ್ಲ ಎಂದ ಎಂ.ಬಿ.ಪಾಟೀಲ್‌‌‌. ಎಂ.ಬಿ.ಪಾಟೀಲ್ ಮುಖ್ಯಮಂತ್ರಿ ಆಕಾಂಕ್ಷಿನಾ ಪ್ರಶ್ನೆ ಇಬ್ಬರೂ ಮಧ್ಯೆ ನಾನೇಕೆ ಬರಲಿಪಾ. ಎಂ.ಬಿ.ಪಾಟೀಲ್ ಗೆ ನೇರವಾಗಿ ಬರುವ ಸಾಮರ್ಥ್ಯ ವಿದೆ. ಪರೋಕ್ಷವಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಗೆ ಟಾಂಗ್

Read More Articles