ಎಸ್‌ಎಸ್‌ಎಲ್‌ಸಿಯಲ್ಲಿ ಮುದಿಬಾಳಯ್ಯ ಸ್ವಾಮಿ ಪ್ರೌಢಶಾಲೆಯ ವಿದ್ಯಾರ್ಥಿಗಳು 100% ಫಲಿತಾಂಶ 

ಬೆಳಗಾವಿ : ಬಿ.ಬಿ.ಎ.ಸಂಘ ಕುರುಣಿ ಶ್ರೀ ಮುದಿಬಾಳಯ್ಯ ಸ್ವಾಮಿ ತವಗಮಠ ಪ್ರೌಢಶಾಲೆ ಘೋಡಗೇರಿ ಈ ಶಾಲೆಯ ವಿದ್ಯಾರ್ಥಿನಿಯಾದ ಸಪ್ನಾ ಅಶೋಕ ಗೌಡನವರ ಅವರು  ಕನ್ನಡ ಮಾಧ್ಯಮದಲ್ಲಿ 2019 20 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 617 ಅಂಕಗಳನ್ನು ಪಡೆದುಕೊಂಡು ಹುಕ್ಕೇರಿ ತಾಲೂಕಿಗೆ 98 % ಶೇಕಡಾ ಅಂಕ ಪಡಿಯುವ ಮೂಲಕ ದ್ವಿತೀಯ ಸ್ಥಾನ ತಂದು ಕೊಟ್ಟಿದ್ದಾಳೆ ವಿದ್ಯಾರ್ಥಿನಿ ಶಾಲೆಗೆ ಹಾಗೂ ಶಿವಾಪೂರ ಗ್ರಾಮಕ್ಕೆ ಹೆಮ್ಮೆ ತಂದಿದ್ದಾಳೆ . ಕನ್ನಡ (125) , ಇಂಗ್ಲಿಷ್ (96) , ಹಿಂದಿ (96) , ವಿಜ್ಞಾನ (100) , ಸಮಾಜ ವ್ಯಾನ (100) ಹಾಗೂ ಗಣಿತ (100) ಅಂಕಗಳನ್ನು ಪಡೆದುಕೊಂಡಿದ್ದು ಸಾಧನೆ ಮಾಡಿದ್ದಾಳೆ. ಈ ವಿದ್ಯಾರ್ಥಿನಿಯ ಸಹಪಾಠಿಗಳಾದ ಸುದೀಪ್ ಗುರನಾತ ವರ್ಜಿ 90.42%, ಗಂಗಾಧರ ಸಿದ್ದಪ್ಪಾ ವಕಾರ 87.04%,  ಸವೀತಾ ಆನಂದ ಶಿರಹಟ್ಟಿ 87.04% ಉತ್ತಮ ಫಲಿತಾಂಶ ತೆಗೆಯುವ ಮೂಲಕ ಇಡೀ ಶಾಲೆಗೆ ಹೆಮ್ಮೆ ತಂದಿದ್ದಾರೆ ವಿದ್ಯಾರ್ಥಿಗಳ ಸಾಧನೆಗೆ ಇಡೀ ಶಿವಾಪೂರ ಹಾಗೂ ಘೋಡಗೇರಿ ಗ್ರಾಮದ ಜನರು  ಸಂತೋಷ ವ್ಯಕ್ತಪಡಿಸಿದ್ದಾರೆ . ಮುದಿಬಾಳಯ್ಯ ಸ್ವಾಮಿ ತವಗಮಠ ಪ್ರೌಢಶಾಲೆಯ ಆಡಳಿತ ಮಂಡಳಿ  ಶಿಕ್ಷಕವೃಂದ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ .

promotions

promotions

Read More Articles