ರೈತರು ಸೂಕ್ತ ಮಾಹಿತಿ ಹೊಂದಿ ಕೃಷಿ ಉನ್ನತೀಕರಣಕ್ಕೆ ಕೈಜೋಡಿಸಲಿ: ಚನ್ನರಾಜ ಹಟ್ಟಿಹೊಳಿ
- 2 Jan 2024 , 9:01 AM
- Belagavi
- 100
ಬೆಳಗಾವಿ: ಕೃಷಿ ಸಂಬಂಧಿ ಹಲವಾರು ಯೋಜನೆಗಳಿದ್ದು ರೈತರು ಅವುಗಳ ಸದುಪಯೋಗ ಪಡೆದು ಕೃಷಿ ಕ್ಷೇತ್ರದ ಉನ್ನತೀಕರಣಕ್ಕೆ ಕೈಜೋಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಕರೆ ನೀಡಿದರು.

ಅವರು ಸಮಗ್ರ ಕೃಷಿ ಅಭಿಯಾನ ಯೋಜನೆಯಡಿ 2022- 23ನೇ ಸಾಲಿನ ಕೃಷಿ ಮಾಹಿತಿ ನೀಡುವ ರಥಕ್ಕೆ ಉಚಗಾಂವ ಗ್ರಾಮದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಈ ಕೃಷಿ ಮಾಹಿತಿ ರಥ ರೈತರಿಗೆ ಸಹಕಾರಿಯಾಗಲಿದ್ದು ಅವರ ಕೃಷಿ ಚಟುವಟಿಕೆಗಳ ಕುರಿತು ಸಮಗ್ರವಾದ ಮಾಹಿತಿ ನೀಡಲಿದೆ. ಈ ರಥದಲ್ಲಿ ಕೃಷಿಯ ಬಗ್ಗೆ ಸಮಗ್ರ ಮಾಹಿತಿಗಳನ್ನು ಅರಿತ ತಜ್ಞರಿದ್ದು, ರೈತರಿಗೆ ರಸಗೊಬ್ಬರಗಳ, ಬೀಜಗಳ, ವಿವಿಧ ಯಂತ್ರೋಪಕರಣಗಳ ಹಾಗೂ ಕ್ರಿಮಿನಾಶಕಗಳ ಮಾಹಿತಿಯನ್ನು ರವಾನಿಸಲಿದ್ದಾರೆ. ಆದ್ದರಿಂದ ರೈತರು ಇದರ ಸಂಪೂರ್ಣ ಮಾಹಿತಿ ಮತ್ತು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಕೃಷಿ ಸಹಾಯಕ ನಿರ್ದೇಶಕ ಆರ್. ಬಿ. ನಾಯ್ಕರ್, ಉಚಗಾಂವ ಕೃಷಿ ಅಧಿಕಾರಿ ಸಿ.ಎಸ್. ನಾಯ್ಕ್, ಮಲ್ಲೇಶ ನಾಯ್ಕ, ಭಾಗ್ಯಶ್ರೀ ಪಾಟೀಲ, ಆಸಿಫ್ ತಹಶೀಲ್ದಾರ್, ಸಂಜಯ ತಳವಾರ, ಉಚಗಾಂವ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.










