ಕೊಟ್ಟಗೆಯಲ್ಲಿ ದನ ತುಂಬಿದಂತೆ ಶಾಲಾ ವಾಹನದಲ್ಲಿ ಮಕ್ಕಳನ್ನು ತುಂಬದಂತೆ ಪಿ ಎಸ್ ಐ ವಾರ್ನಿಂಗ್
- 15 Jan 2024 , 12:43 AM
- Belagavi
- 110
ಅಥಣಿ: ಶಾಲಾ ವಾಹನಗಳಲ್ಲಿ, ಆಟೋರಿಕ್ಷಾಗಳಲ್ಲಿ ಮಕ್ಕಳನ್ನು ಮಿತಿಮೀರಿ ತುಂಬಿಕೊಂಡು ಹೋಗುವ ಅಪಾಯಕಾರಿ ಪರಿಪಾಠ ಇತ್ತೀಚಿನ ಹೆಚ್ಚಾಗಿದೆ, ಪ್ರತಿ ನಿತ್ಯ ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡು ಶಾಲೆಗೆ ಬಂದು ಹೋಗಬೇಕಾಗಿದೆ ಅದಕ್ಕಾಗಿ ಇವತ್ತು ಅಥಣಿ ಪಟ್ಟಣದ ಎಲ್ಲ ಶಾಲೆಯ ವಾಹನಗಳನ್ನು ತಡೆದು ತಪಾಸಣೆ ಮಾಡಲಾಗಿದೆ ಎಂದು ಪಿಎಸ್ಐ ಕುಮಾರ ಹಾಡಕರ ಅವರು ತಿಳಿಸಿದರು

ಅವರು ಇವತ್ತು ಪಟ್ಟಣದಲ್ಲಿ 4-5 ಮಕ್ಕಳನ್ನು ಕರೆದೊಯ್ಯಬೇಕಾದ ರಿಕ್ಷಾಗಳಲ್ಲಿ 15ಕ್ಕಿಂತ ಹೆಚ್ಚು ಮಕ್ಕಳನ್ನು ತುಂಬುತ್ತಾರೆ. ಕೊಟ್ಟಿಗೆಯಲ್ಲಿ ದನಗಳನ್ನೂ ಸಹ ಇಷ್ಟೊಂದು ಹೀನಾಯವಾಗಿ ತುಂಬಲಾರರು. ಚಾಲಕ ಕೂಡ್ರೂವ ಜಾಗದಲ್ಲೂ 3-4 ಮಕ್ಕಳನ್ನು ಕೂಡ್ರಿಸಿಕೊಳ್ಳುತ್ತಾರೆ. ಜತೆಗೆ ದೊಡ್ಡ ಪಠ್ಯಪುಸ್ತಕ ತುಂಬಿದ ಬ್ಯಾಗೊಂದಿಷ್ಟು ಬೇರೆ. ರಿಕ್ಷಾದ ಹೊರಗಡೆಗೆ ಜೋತು ಬಿದ್ದಿರುತ್ತವೆ. ರಸ್ತೆಯಲ್ಲಿ ಓಡಾಡುತ್ತಿರುವ ವಾಹನಗಳು ಸ್ವಲ್ಪ ತಾಗಿದರೂ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚೆತ್ತುಕೊಂಡು ಇವತ್ತು ನಮ್ಮ ಸಿಬ್ಬಂದಿ ನಾವು ಸೇರಿ ಎಲ್ಲ ವಾಹನ ತಪಾಸಣೆ ನಡೆಸಿ, ಅವರಿಗೆ ಹೆಚ್ಚು ಮಕ್ಕಳನ್ನು ಹಾಕದಂತೆ ಎಚ್ಚರಿಕೆ ಕೊಟ್ಟಿದ್ದೆವೆ ಎಂದು ತಿಳಿಸಿದರು.

ಹಾಗೂ ಎಲ್ಲ ಪಾಲಕರಿಗೂ ತಮ್ಮ ಮಕ್ಕಳಿಗೆ ಸರಿಯಾದ ವಾಹನ ಕಲ್ಪಿಸಿ ಅನಾಹುತಗಳು ಆಗದಂತೆ ಮುಂಜಾಗೃತೆ ವಹಿಸಿ ಎಂದು ತಿಳಿಸಿದರು.










