ಎಸ್‌ಎಸ್‌ಎಲ್‌ಸಿಯಲ್ಲಿ ನೇರ್ಲಿ ಸರಕಾರಿ ಪ್ರೌಢ ಶಾಲೆಯ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳು
- 15 Jan 2024 , 1:12 AM
- Belagavi
- 122
ಹುಕ್ಕೇರಿ : ತಾಲೂಕಿನ ನೇರ್ಲಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ವಿಧ್ಯಾರ್ಥಿಗಳು ಈ ಭಾರಿಯ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುವುದರ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಪೂಜಾ ರವೀಂದ್ರ ಲಟ್ಟಿ ಪ್ರತಿಶತ 95.36% ಫಲಿತಾಂಶ ದಾಖಲಿಸಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ. ಇನ್ನುಳಿದಂತೆ ಸುರೇಖಾ ಶಿವಾನಂದ ಬಂತಿ ಪ್ರತಿಶತ 94.56% ಫಲಿತಾಂಶ ದಾಖಲಿಸಿ ದ್ವಿತೀಯ ಸ್ಥಾನ ಪಡೆದರೆ ಸೂರಜ್ ಬಾಳಗೌಡ ಪಾಟೀಲ ಪ್ರತಿಶತ 91.04% ಫಲಿತಾಂಶ ದಾಖಲಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ.

ಹಾಗೂ ಲಕ್ಷ್ಮಿ ಗುರಲಿಂಗಯ್ಯಾ ಭಾವಿಮನಿ ಪ್ರತಿಶತ 90.72% ಫಲಿತಾಂಶ ದಾಖಲಿಸಿ ಚತುರ್ಥಿ ಸ್ಥಾನ ಪಡೆದಿದ್ದಾಳೆ. ಈ ಎಲ್ಲ ವಿದ್ಯಾರ್ಥಿಗಳಿಗೆ ನೇರ್ಲಿ ಸರಕಾರಿ ಪ್ರೌಢ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದ್ದಾರೆ.










