ಕರಿಮಸೂತಿ ಕೆನಾಲನಲ್ಲಿ ನಡೆದ ಕೊಲೆ ಬೇಧಿಸಿದ ಐಗಳಿ ಪೊಲೀಸರು: ಎಸ್ಪಿ

ಬೆಳಗಾವಿ:ಕರಿಮಸೂತಿ ಕೆನಾಲ ರಸ್ತೆ ಹಿಡಿದು ಚಮಕೇರಿಗೆ ಹೊರಟಾಗ ಯಂಕಪ್ಪ ಗ್ರಾಮದ ಹದ್ದಿಯಲ್ಲಿ ಇರುವ ಪಡೋಲಕರ ಇವರ ಜಮೀನ ಹತ್ತಿರ ಇರುವ ಕೆನಾಲ ಕಾಲುವೆಯ ನೀರಲ್ಲಿ ಒಬ್ಬ ಗಂಡಸ್ಸಿನ ಶವವು ಕಂಟೆಗೆ ತಾಗಿ ನಿಂತುಕೊಂಡಿತ್ತು. ನಾನು ಆ ತವ ಪರಿಶೀಲಿಸಲಾಗಿ ಅದು ಸುಮಾರು 20-25 ವರ್ಷದ ಮೃತ ದೇಹ ಇದ್ದು ಅವನಿಗೆ ಯಾರೋ ಆರೋಪಿತರು ಯಾವುದೋ ಕಾರಣಕ್ಕೆ ಎಡಗಡೆ ಹಣೆಗೆ ಮುಂದೆಲೆ, ಎಡಕಣ್ಣಿನ ಕೆಳಗೆ, ಒಂದೆಲೆಗೆ ಯಾವುದೋ ಹರಿತವಾದ ಆಯುಧದಿಂದ ಹೊಡೆದು ಭಾರಿ ಗಾಯಪಡಿಸಿ ಕೊಲೆ ಮಾಡಿದ ಬಗ್ಗೆ ತಿಳಿದು ಬಂತು. ಸದರಿ ಮೃತನ ಮೈಮೇಲೆ ಇಸ್ಸಾ ಕಂಪನಿಯ ನೀಲಿ ಬಣ್ಣದ ಅಂಡರವೇ‌ ಧರಿಸಿದ್ದು, ಮೃತನ ಬಲಗೈ ಮುಂಗೈ ಮೇಲೆ ವಿಠಲ. ಮತ್ತು ಬಲಗೈ ಮುಂಗೈ ಮೇಲೆ ಮೇಲೊಡಿ ಚಿಹ್ನೆ ಮತ್ತು ಎಡಗೈ ಮುಂಗೈ ಒಳಬಾಜು ಇಂಗ್ಲೀಷ ಅಕ್ಷರದಲ್ಲಿ ಎಜೆ ಅಂತಾ ಹಂಚಿಬಟ್ಟದಿಂದ ಬರೆಸಿದ್ದು ಇತ್ತು. ಶವವನ್ನು ಪುರಾವೆ ನಾಶಪಡಿಸುವ ಉದ್ದೇಶದಿಂದ ಎಲ್ಲಿಯೋ ಕನಾಲ ಕಾಲುವೆ ನೀರಿನಲ್ಲಿ ಒಗೆದಿರುತ್ತಾರೆ ಅಂತಾ ಇತ್ಯಾದಿ ನಮೂದ ಇದ್ದ ವಿದ್ಯಾದಿಯನ್ನು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ ಎಂದು ಎಸ್ಪಿ ಡಾ. ಸಂಜೀವ ಪಾಟೀಲ ಹೇಳಿದರು.

promotions

ಶುಕ್ರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು‌.
ಸದರಿ ಮೃತನ ಬಗ್ಗೆ ಯಾವುದೇ ಸುಳಿವು ಇರದ ಕಾರಣ ಇದು ಒಂದು ಕ್ಲಿಷ್ಟ ಪ್ರಕರಣವಾಗಿತ್ತು. ತವ ದೊರೆತ ದಿನದಿಂದ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದರು. ಇದನ್ನು ಅರಿತ ಹಿರಿಯ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಪ್ರಕರಣವನ್ನು ಬೇದಿಸಲು ಒಂದು ತಂಡವನ್ನು ರಚಿಸಿದ್ದು ಸದರಿ ತಂಡವು ನಾಲ್ಕು ದಿನಗಳಲ್ಲಿಯೇ ಯಾವುದೇ ಸುಳಿವು ಇರದ ಅನಾಮದೇಯ ಮೃತ ವ್ಯಕ್ತಿಯನ್ನು ವಿಠಲ ತಿಕಾರಾಮ ಬಗ್ಗೆನ್ನವರ ವಯಸ್ಸು 21 ವರ್ಷ, ಹಾಲಿ ಉಗಾರ ಬಿ.ಕೆ ಮೂಲತ: ಮಹಾರಾಷ್ಟ್ರ ರಾಜ್ಯದ ಗುಗವಾಡ ಎಂದು ಪತ್ತೆಮಾಡಿದ್ದು ಅಲ್ಲದೆ ನಾಲ್ಕ ದಿನಗಳಲ್ಲಿ ಮೃತನನ್ನು ಮತ್ತು ಆರೋಪಿತರನ್ನು ಚಿತ್ರ ಮಾಡುವಲ್ಲಿ ಯಶಸ್ವಿಯಾಗಿರು ತ್ತಾರೆ ಎಂದರು.

promotions

ಈ ಪ್ರಕರಣದ ತನಿಖೆಯಯನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬೆಳಗಾವಿ, ಹಾಗೂ ಪೊಲೀಸ್ ಉಪಾಧೀಕ್ಷಕರು ಶ್ರೀ ಶ್ರೀಪಾದ ಜಲ್ಲೆರವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಗಳಾದ ಶಂಕರಗೌಡ ಬಸನಗೌಡ‌ ಸಿಪಿಐ ಅಥಣಿ ರವರು ತನಿಖೆ ಕೈಗೊಂಡಿದ್ದು ಶ್ರೀ ಎಸ್ ಎಚ್ ಪವಾರ ಪಿಎಸ್‌ಐ ಐಗಳ ಮತ್ತು ಸಿಎಚ್‌ಸಿಗಳಾದ ಎಸ್ ಎಮ್ ಪಡಸಲಗಿ, ಎ ಎ ಈರಕರ, ಎಮ್ ಬಿ ದೊಡ್ಡಮನಿ, ಹಾಗೂ ಸಿಪಿಸಿಗಳಾದ ಎಸ್. ಎಸ್. ಬಬಲೇಶ್ವರ, ಎಮ್ ಎ ಪಾಟೀಲ, ಎ ಸಿ ಮುಜಾವರ, ಜೆ ಐ ಪಟೆಗಾರ, ಎ.ಪಿ.ಸಿ ಪ್ರಶಾಂತ ಆಲಮಟ್ಟಿ ರವರನ್ನೊಳಗೊಂಡ ತಂಡ ಪ್ರಕರಣದ ಜಾಡು ಹಿಡಿದು ಅತೀ ಕಗ್ಗಂಟಾದ ಪ್ರಕರಣವನ್ನು ಗ್ರಾಮದಲ್ಲಿ ಬೀಟ್ ಸಿಬ್ಬಂದಿ ಮುಖಾಂತರ ಗುಪ್ತವಾಗಿ ಮಾಹಿತಿ ಸಂಗ್ರಹಿಸಿ ಬೆಳಕಿಗೆ ತಂದು ಕೊಲೆ ಮಾಡಿದ ಆರೋಪಿ ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿ ಎರಡು ಜನರಿಗೆ ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಆರೋಪಿತರು ಮೃತನ ಮೇಲಿನ ವಯಕ್ತಿಕ ದ್ವೇಷದಿಂದ ಕೊಲೆ ಮಾಡಿರುವುದಾಗಿ ತಿಳಿಸಿರುತ್ತಾರೆ. ಈ ಪ್ರಕರಣವನ್ನು ಬೆಳಕಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಧಿಕಾರಿ ಮತ್ತು ಸಿಬ್ಬಂಧಿ ವರ್ಗದವರನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಬೆಳಗಾವಿರವರು ಶ್ಲಾಘನೆ ಮಾಡಿದ್ದಾರೆ.

Read More Articles