ಶ್ರಾವಣ ಮಾಸ ನಿಮಿತ್ಯ ಬೆಳಗಾವಿಯಲ್ಲಿ ಡಾ.ಅಲ್ಲಮಪ್ರಭು ನೇತೃತ್ವದಲ್ಲಿಜನಜಾಗೃತಿ ಪಾದಯಾತ್ರೆಆರಂಭ

ಬೆಳಗಾವಿ: ಬೆಳಗಾವಿಯಲ್ಲಿ ಶ್ರಾವಣ ಮಾಸದ ನಿಮಿತ್ಯ ನಾಗನೂರುರುದ್ರಾಕ್ಷಿ ಮಠದಡಾ.ಅಲ್ಲಮಪ್ರಭು ಮಹಾಸ್ವಾಮಿಗಳ ನೇತೃತ್ವದಲ್ಲಿ ಹಮ್ಮಿಕೊಂಡಿರುವಒAದು ತಿಂಗಳು ಜನಜಾಗೃತಿ ಪಾದಯಾತ್ರೆಆರಂಭವಾಯಿತು.

promotions

ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ರಾಷ್ಟ್ರೀಯ ಬಸವ ಸೇನೆಯ ಬೆಳಗಾವಿ ಜಿಲ್ಲಾಘಟಕ ಇವುಗಳ ಆಶ್ರಯದಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ ಶುಕ್ರವಾರದಂದು ನಗರದ ಸಹ್ಯಾದ್ರಿ ನಗರದಲ್ಲಿರುವ ಲಕ್ಷ್ಮೀದೇವಸ್ಥಾನದಲ್ಲಿ ಚಾಲನೆ ನೀಡಿದರು. ಭಕ್ತರಿಗೆರುದ್ರಾಕ್ಷಿ ದೀಕ್ಷೆ ನೀಡಿದಡಾ.ಅಲ್ಲಮಪ್ರಭು ಸ್ವಾಮೀಜಿಯವರು ಮಾತನಾಡಿ, "ಪಾದಯಾತ್ರೆ ಮೂಲಕ ಸಮುದಾಯದಜನರ ಬಳಿಗೆ ಮಠಾಧೀಶರು ಹೋದರೆಜನರ ಮನಸ್ಸಿಗೆ, ದೇಹಕ್ಕೆಉಲ್ಲಾಸ, ಉತ್ಸಾಹ ಮೂಡುತ್ತದೆ.

promotions

ಶ್ರಾವಣ ಮಾಸದಲ್ಲಿಜನರು ಶಿವನುಭವ, ಶಿವಯೋಗದಲ್ಲಿ ನಿರತರಾಗಿಅಂತರAಗ-ಬಹಿರAಗ ಶುದ್ಧಿ ಮಾಡಿಕೊಳ್ಳುತ್ತಾರೆ. ಹೀಗಾಗಿ ನಿರಂತರಒAದು ತಿಂಗಳ ಕಾಲ ವಿವಿಧ ಪ್ರದೇಶದಲ್ಲಿರುವಜನರಲ್ಲಿಧರ್ಮಜಾಗೃತಿ ಮೂಡಿಸಲಾಗುತ್ತದೆ" ಎಂದರು. ಕಾರ್ಯಕ್ರಮದಲ್ಲಿಕಾರAಜಿಮಠದ ಶಿವಯೋಗಿ ದೇವರು, ಓಂಗುರೂಜಿ, ಲಿಂಗಾಯತ ಮುಖಂಡ ಬಸವರಾಜರೊಟ್ಟಿ, ಶಂಕರಗುಡಸ, ಹಿರೇಮಠ, ಡಾ.ರವಿ ಪಾಟೀಲ, ಇನ್-ನ್ಯೂಸ್ ಪ್ರಧಾನ ಸಂಪಾದಕರಾಜಶೇಖರ ಪಾಟೀಲ, ಕುಂದ್ರಾಳ ಬಾಳೆ, ಪ್ರೊ. ಶ್ರೀಕಾಂತ ಶಾನವಾಡ, ಸೇರಿದಂತೆ ಅನೇಕ ಗಣ್ಯರು, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ರಾಷ್ಟ್ರೀಯ ಬಸವ ಸೇನೆ,ಲಿಂಗಾಯತಕ್ಷೇಮಾಭಿವೃದ್ಧಿ ಸಂಘ- ಸಹ್ಯಾದ್ರಿ ನಗರ, ಕುವೆಂಪು ನಗರದ ಶಂಕರ ಶೆಟ್ಟಿ, ಕಟ್ಟಿಮನಿ ರುದ್ರಗೌಡ, ಶ್ರೀಮತಿ ದೇಯನ್ನವರ, ಶೈಲಾ, ಸುನಿತಾ ಮಗದುಮ್ಮ,ಕುಂದ್ರಾಳ ಬಾಳೆ ಪ್ರೋ ಶಾನಷಾಡ.ಹಿರೇಮಠ ಪದಾಧಿಕಾರಿಗಳು, ಶರಣ-ಶರಣೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

Read More Articles