ಬೆಳವಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಳು ಮಜುಕರ್ ಕಾಂಗ್ರೆಸ್ ಸೇರ್ಪಡೆ

ಬೆಳಗಾವಿ: ಬೆಳವಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಳು ಮಜುಕರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

promotions

ಹಿಂಡಲಗಾ ಗ್ರಾಮದಲ್ಲಿ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ " ಯೂಥ್ ಜೋಡೋ ಬೂತ್ ಜೋಡೋ " ಕಾರ್ಯಕ್ರಮದಲ್ಲಿ ಮಾಳು ಮಜುಕರ್ ತಮ್ಮ ಸಂಗಡಿಗರೊಂದಿಗೆ ಕಾಂಗ್ರೆಸ್ ಸೇರಿದರು. ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಕಾಂಗ್ರೆಸ್ ಶಾಲು ಹೊದೆಸಿ ಪಕ್ಷಕ್ಕೆ ಬರಮಾಡಿಕೊಂಡರು. ಮಾಳು ಮಜುಕರ್ ಮಹಾರಾಷ್ಟ್ರ ಏಕೀಕರಣ ಸಮಿತಿಯಲ್ಲಿದ್ದರು.

promotions

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಯುವಕರು ಸಂಘಟಿತರಾಗಿ, ಕ್ರಿಯಾಶೀಲರಾಗಿ ಪಕ್ಷವನ್ನು ತಳಮಟ್ಟದಿಂದ ಬೆಳೆಸಬೇಕಿದೆ. ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಾದರೆ ಯುವ ಪೀಳಿಗೆಯ ಪಾತ್ರ ಅತ್ಯಮೂಲ್ಯ, ದೇಶದಲ್ಲಿ ಯುವಕರು ಶ್ರಮ ವಹಿಸಿದರೆ ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಹುದು ಎಂದರು.

ಈ ಸಂದರ್ಭದಲ್ಲಿ ಭಾರತೀಯ ಯುವ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಬಂಟಿ ಸೆಳಕೆ, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಮನೋಹರ ಬೆಳಗಾಂವ್ಕರ್, ಸಾತೇರಿ ಬೆಳವಟ್ಕರ್, ಬಾಗಣ್ಣ ನರೋಟಿ, ಚತ್ರೆ, ಮಹೇಶ ಕೋಲಕಾರ, ಮಲ್ಲೇಶ ಚೌಗುಲೆ, ಅಶೋಕ ಕಾಂಬಳೆ, ಬಾಳು ದೇಸೂರಕರ್, ವೆಂಕಟ್ ಪಾಟೀಲ, ಅಜಿತ್ ಕದಂ, ಯಲ್ಲಪ್ಪ ಡೆಕೋಳ್ಕರ, ಜಯರಾಮ ಪಾಟೀಲ, ಮಾರುತಿ ಬೆಳಗಾಂವ್ಕರ್, ಗಜಾನನ ಕಾಕತ್ಕರ್, ನಾರಾಯಣ ನಲವಡೆ, ಮಲ್ಲಿಕಾರ್ಜುನ ಲೋಕೂರ ಮುಂತಾದವರು ಉಪಸ್ಥಿತರಿದ್ದರು.

Read More Articles