ಮಹಾ ಶಿವಯೋಗಿಗಳ 43ನೇ ಪುಣ್ಯತಿಥಿ
- Shivaraj Bandigi
- 12 Jan 2024 , 5:15 AM
- Belagavi
- 212
ಅಥಣಿ : ತಾಲೂಕಿನ ಸುಕ್ಷೇತ್ರವಾದ ಹಲ್ಯಾಳ ಗ್ರಾಮದ ಮು.ನಿ.ಪ್ರ ಗುರು ಸಿದ್ದೇಶ್ವರ ಮಹಾ ಶಿವಯೋಗಿಗಳ 43ನೇ ಪುಣ್ಯ ತಿಥಿ ಜಾತ್ರಾ ಮಹೋತ್ಸವ ಅತಿ ವಿಜೃಂಭಣೆಯಿಂದ ಜರುಗಿತು

ಬೆಳಿಗ್ಗೆ ಶ್ರೀಗಳ ಗದ್ದುಗೆ ವಿಶೇಷ ಪೂಜೆ ಮಹಾಭಿಷೇಕ ಜರುಗಿತು ನಂತರದಲ್ಲಿ ಗ್ರಾಮದ ಮುತ್ತೈದೆ ರಿಂದ ಕುಂಭಮೇಳ ಜರಗಿತು. ಇಂದಿನ ಪರಂಪರೆಯಂತೆ ಶ್ರೀಗಳನ್ನು ಎತ್ತಿನ ಗಾಡಿಯಲ್ಲಿ ಕೂಡಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರಗಿತು ಈ ಜಾತ್ರಾ ಮಹೋತ್ಸವದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ವಿಧ ವಾದ್ಯ ಮೇಳಗಳು ಈ ಜಾತ್ರ ಮಹೋತ್ಸವಕ್ಕೆ ಮೆರಗು ನೀಡಿದವು ನಂತರದಲ್ಲಿ ಪಲ್ಲಕ್ಕಿ ಮಠಕ್ಕೆ ಆಗಮಿಸಿದ ನಂತರ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತಾದಿಗಳು ಶ್ರೀ ಗುರು ಸಿದ್ದೇಶ್ವರ ದರ್ಶನ ಪಡೆದು ಅವರ ಆಶೀರ್ವಾದಕ್ಕೆ ಪಾತ್ರರಾದರು. ತದನಂತರ ಮಹಾಪ್ರಸಾದ ಜರುಗಿತು
ರಾತ್ರಿ ಭಜನೆ ಹಾಗೂ ಗುರುಸಿದ್ದೇಶ್ವರ ಬಾಲ್ಯ ನಾಟ್ಯ ಸಂಘದವರಿಂದ ಗುರುಸಿದ್ದೇಶ್ವರ ಮಹಾತ್ಮೆ ಎಂಬ ನಾಟಕ ಜರುಗಿತು

ಈ ಜಾತ್ರಾ ಮಹೋತ್ಸವದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮುದುಕಣ್ಣ ಸೇಗುಣಿಸಿ. ಗ್ರಾಮದ ಯುವ ಮುಖಂಡರಾದ ಯಲ್ಲಾಲಿಂಗ ಪಾಟೀಲ್ ಸುರೇಶ್ ವಾಡೆದ. ರಾವಸಾಹೇಬ ಬಿಪಾಟೀಲ. ಮಂಜುನಾಥ್ ಶೇಡಶಾಳ. ರಾಜೇಶ್ ಶಿಂಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷರಾದ ಮಹಾದೇವ ಮಡಿವಾಳ ರಾಹುಲ್ ಮಾದರ ಗ್ರಾಮದ ಹಿರಿಯ ಮುಖಂಡರುಗಳು ಈ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದರು.
ವರದಿಗಾರ : ರಾಹುಲ್










