ಜಾತ್ರೆಯ ಪ್ರಸಾದ ಸೇವಿಸಿ 46ಜನ ಅಸ್ತವ್ಯಸ್ಥ. ಐವರ ಸ್ಥಿತಿ ಗಂಭೀರ!

ಬೆಳಗಾವಿ : ಜಾತ್ರೆಯಲ್ಲಿ ಪ್ರಸಾದ ಸೇವನೆಯಿಂದ ಅಪಾರ ಭಕ್ತರು ಅಸ್ತವ್ಯಸ್ತಗೊಂಡ ಘಟನೆ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನಡೆದಿದೆ. 

promotions

ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಭೀರೇಶ್ವರ ಮತ್ತು ಕರೆಮ್ಮದೇವಿ ಜಾತ್ರಾ ಮಹೋತ್ಸವ ನಡೆದಿತ್ತು ಜಾತ್ರೆಯಲ್ಲಿ ಅನ್ನ, ಮಾವಿನ ಹಣ್ಣಿನ‌ ಶೀಖರಣಿ ಪ್ರಸಾದ ಸೇವಿಸಿದ್ದ. ಸುಮಾರು 51 ಜನರಿಗೆ ಏಕಾಏಕಿ ವಾಂತಿಭೇದಿ ಕಂಡುಬಂದಿದೆ. 

promotions

ಕೂಡಲೇ ಅಸ್ತವ್ಯಸ್ಥಗೊಂಡವರಿಗೆ ಸ್ಥಳೀಯ ಹಾಗೂ ಸವದತ್ತಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. 5 ಜನರ ಸ್ಥತಿ ಗಂಬೀರವಾಗಿದ್ದು ಅವರನ್ನು ಧಾರವಾಡದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. 

ಯಾವುದೇ ಅಹಿತಕರ ಘಟನೆ ಜರುಗದಂತೆ ಮುಂಜಾಗೃತಾ ಕ್ರಮವಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಸದ್ಯ ಗ್ರಾಮದಲ್ಲಿಯೇ ಬೀಡುಬಿಟ್ಟಿದ್ದು, ಕ್ಯಾಂಪ ತೆರೆದು ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. 

ಈವರೆಗೂ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ಮಹೇಶ ಜೋಶಿ ಮಾಹಿತಿ ನೀಡಿದ್ದು, ಶಾಸಕ ವಿಶ್ವಾಸ ವೈದ್ಯ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದ್ದಾರೆ.

Read More Articles