ತಂಬಾಕು ಹರಾಜು ಮಾರುಕಟ್ಟೆ ಶೀಘ್ರದಲ್ಲೇ ಆರಂಭ

  • 15 Jan 2024 , 12:50 AM
  • Mysuru
  • 177

ಮೈಸೂರು: ರಾಜ್ಯದಲ್ಲಿಯೇ ಅತಿ ಹೆಚ್ಚು ವರ್ಜಿನೀಯ ತಂಬಾಕು ಉತ್ಪಾದನೆ ಮಾಡುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಾಲೂಕಿನಾದ್ಯಂತ ಬೆಳೆಗಾರರು, ತಂಬಾಕು ಹದ (ಕೊಯ್ಲು) ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಆರಂಭವಾಗಬೇಕಿದ್ದ ತಂಬಾಕು ಮಾರುಕಟ್ಟೆ ಈ ಕೋರೊನಾ ಹಾಗೂ ಮಳೆಯ ಹಿನ್ನೆಲೆಯಲ್ಲಿ ತಡವಾಗಿ ಸಪ್ಟೆಂಬರ್ ತಿಂಗಳಿನ ಕೊನೆ ಅಥವಾ ಆಕ್ಟೊಬರ್ ಮೊದಲ ವಾರದಲ್ಲಿ ಈ ತಂಬಾಕು ಮಾರುಕಟ್ಟೆ ಆರಂಭವಾಗಲಿದೆ ಎಂದು ಪ್ರಾದೇಶಿಕ ವ್ಯವಸ್ಥಾಪಕ ಮಂಜುನಾಥ ತಿಳಿಸಿದ್ದಾರೆ. ಕಟ್ಟೆಮಳೇವಾಡಿ ಮಾರುಕಟ್ಟೆಯಲ್ಲಿ ಮಾತನಾಡಿದ ಅವರು ಕಾರೋನ ವೈರಿಸ್ ದೇಶದೆಲ್ಲೆಡೆ ವ್ಯಾಪಿಸಿದ್ದು ಈ ಬಾರಿ ತಂಬಾಕು ಮಾರುಕಟ್ಟೆಗಳು ತಡವಾಗಿ ಆರಂಭವಾಗಿವೆ ಹಾಗೂ ಆಂಧ್ರ ಪ್ರದೇಶದ ಕೆಲವು ಮಾರುಕಟ್ಟೆಗಳು ಸೀಲ್ ಡೌನ್ ಆಗಿರುವುದರಿಂದ ಅಲ್ಲಿನ ಮಾರುಕಟ್ಟೆಯ ಹರಾಜು ಮುಗಿದ ಮೇಲೆ ಇಲ್ಲಿ ಆರಂಭ ಮಾಡಲಾಗುವುದು. ಅವರು ಕಳೆದ ಬಾರಿ ಕಂಪನಿ ಗಳು ನೀಡಿದ ಟಾರ್ಪಲ್ ಗಳು ಕಳಪೆ ಗುಣಮಟ್ಟಆಗಿದ್ದರಿಂದ ಈ ಬಾರಿ ನಾಲ್ಕೈದು ಕಂಪನಿಗಳು ಟಾರ್ಪಲ್ ಗಳನ್ನ ನೀಡಲು ಮುಂದೆ ಬಂದಿವೆ. ಗುಣಮಟ್ಟದ ಟಾರ್ಪಲ್ ಗಳನ್ನು ನೀಡುವ ಕಂಪನಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಮಂಜುನಾಥ ತಿಳಿಸಿದ್ದಾರೆ.

promotions

promotions

Read More Articles