ಗಡಿನಾಡಿಗೆ ಹೆಚ್ಚಿದ ಹೊರ ರಾಜ್ಯದ ಆತಂಕ; 1818 ಜನರ ವರದಿ ನಿರೀಕ್ಷೆಯಲ್ಲಿ ಬೆಳಗಾವಿ ಜಿಲ್ಲಾಡಳಿತ

ಬೆಳಗಾವಿ: ಗಡಿನಾಡು ಬೆಳಗಾವಿ ಜಿಲ್ಲೆಗೆ ಹೊರ ರಾಜ್ಯದ ನಂಜಿನ ಆತಂಕ ಶುರುವಾಗಿದೆ. ಜಿಲ್ಲೆಯಲ್ಲಿ 41 ಆಕ್ಟಿವ್ ಕೊರೊನಾ ಪಾಸಿಟಿವ್ ಕೇಸ್ ಇವೆ. 12855 ಜನರ ಮೇಲೆ‌ ನಿಗಾ ಇಡಲಾಗಿದೆ. ಒಟ್ಟು 4534 ಜನರಿಗೆ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ಮಾಡಿದ್ದು, ಒಟ್ಟು 1927 ಜನರಿಗೆ 14 ದಿನಗಳ ಹೋಮ್ ಕ್ವಾರಂಟೈನ್ ಹಾಗೂ 6353 ಜನರ 28 ದಿನಗಳ ಹೋಮ್ ಕ್ವಾರಂಟೈನ್ ಕಂಪ್ಲೀಟ್ ಮಾಡಲಾಗಿದೆ. ಒಟ್ಟು 41 ಜನರಿಗೆ ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 11559 ಜನರ ಥ್ರೋಟ್ ಸ್ವ್ಯಾಬ್ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ 140 ಜನರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು ಇದರಲ್ಲಿ ಓರ್ವ ವೃದ್ಧೆ ಸಾವನಪ್ಪಿದ್ದಾಳೆ, 106 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 9424 ಜನರ ವರದಿ ಕೊರೊನಾ ನೆಗೆಟಿವ್ ಬಂದಿದ್ದು, 1818 ಜನರ ವರದಿ ನಿರೀಕ್ಷೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಇದೆ.

promotions

Read More Articles