ಶ್ರೀ. ವೇ.ಮೂ.ಮೃತ್ಯುಂಜಯ ಶ್ರೀಗಳು ಲಿಂಗೈಕ್ಯ

  • 15 Jan 2024 , 2:07 AM
  • Haveri
  • 174

ಬ್ಯಾಡಗಿ: ತಾಲೂಕಿನ ಸುಕ್ಷೇತ್ರ ಗುಡ್ಡದ ಮಲ್ಲಾಪುರ ಗ್ರಾಮದ ಶ್ರೀ ಷ.ಬ್ರ.ಮೂಕಪ್ಪ ಶಿವಾಚಾರ್ಯ ಮಹಾಸ್ವಾಮಿಗಳ ಸಂಸ್ಥಾನ ದಾಸೋಹಮಠದ ಧರ್ಮಾಧಿಕಾರಿ ಶ್ರೀ. ವೇ.ಮೂ.ಮೃತ್ಯುಂಜಯ ಶ್ರೀಗಳು ಶನಿವಾರ ಲಿಂಗೈಕ್ಯರಾದರು. ಅನಾರೋಗ್ಯದ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ಇವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶ್ರೀಗಳು ಶನಿವಾರ ತಡರಾತ್ರಿ ಕೊನೆಯುಸಿರೆಳೆದರು. ಬಳಿಕ ಶ್ರೀಮಠದ ಆವರಣದಲ್ಲಿ ವೀರಶೈವ ಲಿಂಗಾಯತ ಪದ್ದತಿಯ ವಿಧಿ ವಿಧಾನಗಳೊಂದಿಗೆ ಸಂಸ್ಕಾರವನ್ನು ನೆರವೇರಿಸಲಾಯಿತು. ಎಲ್ಲೆಡೆ ಕರೋನಾ ಹರಡುವಿಕೆ ಮುಂಜಾಗೃತ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಾರದಂತೆ ಮನವಿ ಮಾಡಲಾಗಿತ್ತು.

promotions

promotions

Read More Articles