ಅಲ್ಪಸಂಖ್ಯಾತ ಇಲಾಖೆಯ ವಿವಿಧ ಕಾಮಗಾರಿಗಳಿಗೆ 5 ಕೋಟಿ ರೂ ಮಂಜೂರು : ಶಾಸಕ ಲಕ್ಷ್ಮಣ ಸವದಿ
- shivaraj bandigi
- 10 Mar 2024 , 7:13 PM
- Belagavi
- 384
ಅಥಣಿ : ಅಥಣಿ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರ್ಕಾರದಿಂದ 5 ಕೋಟಿ ರೂಪಾಯಿ ಅನುದಾನಕ್ಕೆ ಮಂಜೂರಾತಿ ಪಡೆದುಕೊಳ್ಳಲಾಗಿದ್ದು, ಎರಡನೇ ಹಂತದಲ್ಲಿ ಇನ್ನೂ ಐದು ಕೋಟಿ ರೂಪಾಯಿ ಅಭಿವೃದ್ಧಿ ಅನುದಾನ ತಂದು ವಿವಿಧ ಕಾಮಗಾರಿಗಳನ್ನು ಕೈಕೊಳ್ಳಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅವರು ಅಥಣಿ ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿನ ಈದ್ಗಾ ಮೈದಾನದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಚುನಾವಣೆ ಪೂರ್ವದಲ್ಲಿ ತಮ್ಮ ಬೇಡಿಕೆಗಳಿಗೆ ಭರವಸೆ ನೀಡಿದಂತೆ 5 ಕೋಟಿ ರೂಪಾಯಿ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಸಿಸಿ ರಸ್ತೆ ಸುಧಾರಣೆ, ಕುಡಿಯುವ ನೀರು, ಶೌಚಾಲಯ ನಿರ್ಮಾಣ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳಿಗೆ ಈ ಅನುದಾನವನ್ನ ಬಳಸಲಾಗುವುದು. ಮೊದಲ ಹಂತವಾಗಿ 9 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು , ಪುರಸಭೆ ಸದಸ್ಯರು ಈ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿಗಳಾಗುವಂತೆ ನಿಗ ವಹಿಸಬೇಕೆಂದು ಸಲಹೆ ನೀಡಿದರು.

ಅಲ್ಪಸಂಖ್ಯಾತರ ನಿಧಿಯಿಂದ 5 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯನ್ನ ಸರ್ಕಾರದ ಏಜೆನ್ಸಿಯಾಗಿರುವ ಕೆ ಆರ್ ಡಿ ಸಿ ಎಲ್ ಸಂಸ್ಥೆಗೆ ಒಹಿಸಲಾಗಿದ್ದು ಇನ್ನೂ ಎರಡು ದಿನದಲ್ಲಿ ಪವಿತ್ರ ರಮ್ಜಾನ್ ತಿಂಗಳ ಆರಂಭವಾಗಲಿದೆ. ಅದಕ್ಕಾಗಿ ಈ ನಿಟ್ಟಿನಲ್ಲಿ ಇಂದು ಈದ್ಗಾ ಮೈದಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ.ರಂಜಾನ್ ತಿಂಗಳ ಅಂತ್ಯದ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದ ಅವರು ಅಲ್ಪಸಂಖ್ಯಾತರು ಹೆಚ್ಚು ಇರುವ ಸ್ಥಳಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡುವಂತೆ ಸೂಚಿಸಿದರು. ರಂಜಾನ್ ತಿಂಗಳು ಅಂತ್ಯದ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಮುಸ್ಲಿಂ ಸಮಾಜದ ಧರ್ಮ ಗುರು ಮುಫ್ತಿ ಹಬಿಬುಲ್ಲಾ ಕಾಶ್ಮಿ ಮಾತನಾಡಿ ಮುಸ್ಲಿಂ ಸಮಾಜದ ಅಭಿವೃದ್ಧಿಗಾಗಿ ವಿಶೇಷ ಅನುದಾನ ಒದಗಿಸಲು ಶ್ರಮಿಸಿದ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಮಾಜದ ಪರವಾಗಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಅಂಜುಮನ್ ಸಂಸ್ಥೆಯ ಅದ್ಯಕ್ಷರಾದ ಸಯ್ಯದ್ ಅಮಿನ ಗದ್ಯಾಳ,ಮುಖಂಡರಾದ ಅಸ್ಲಂ ನಾಲಬಂದ, ಅತೀಕ ಮೋಮಿನ್ , ಆರೀಪ್ ನಾಲಬಂದ , ಆಸೀಪ ನಾಲಬಂದ , ರಾಜು ಬುಲಬುಲೆ, ಸಂತೋಷ ಸಾವಡಕರ, ರಾವಸಾಬ ಐಹೊಳೆ, ಮಲ್ಲು ಹುದ್ದಾರ್, ಹಾಜಿ ಬಾಬು ಗದ್ಯಾಳ್, ಹಾಜಿ ಬಾಬು ಮುಲ್ಲಾ, ಹಾಜಿ ಅಕ್ಬರ್ ಮುಲ್ಲಾ, ಹಾಜಿ ಶಫಿ ಮುಲ್ಲಾ, ರಿಯಾಜ್ ಸನದಿ, ಅಬ್ದುಲ ಅಜೀಜ್ ಮುಲ್ಲಾ, ಆಬಿದ ಮಾಸ್ಟರ್, ಇಲಿಯಾಸ್ ಹಿಪ್ಪರಗಿ, ಬಾಬು ಖೆಮಲಾಪೂರ್, ಐ.ಜಿ ಬಿರಾದಾರ್, ಇರ್ಷಾದ್ ಮನಗೂಳಿ, ಸಯ್ಯದ ಗಡ್ಡೆಕರ, ಸಲಾಂ ಕಲ್ಲಿ, ಅತಿಕ್ ಮೊಮೀನ್ ಸೇರಿದಂತೆ ಅಂಜುಮನ್ ಎ ಇಸ್ಲಾಂ ಕಮಿಟಿಯ ಸರ್ವ ಸದಸ್ಯರು ಹಾಗೂ ಪುರಸಭೆ ಸದಸ್ಯರು, ಮುಸ್ಲಿಂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ವರದಿ : ರಾಹುಲ್










