ನಟಿ ರಾಗಿಣಿಗೆ ಬೆಳ್ಳಂಬೆಳಗ್ಗೆ ಶಾಕ್ ನೀಡಿದ ಸಿಸಿಬಿ ಪೊಲೀಸ್..

ಬೆಂಗಳೂರು : ಸ್ಯಾಂಡಲ್‌ವುಡ್‌ನ ನಟಿ ರಾಗಿಣಿ ದ್ವಿವೇದಿಗೆ, ಸಿಸಿಬಿ ಪೊಲೀಸರು ಶುಕ್ರವಾರ ಬೆಳ್ಳಂಬೆಳಗ್ಗೆಯೇ ಶಾಕ್ ನೀಡಿದ್ದಾರೆ. ಡ್ರಗ್ಸ್ ಮಾಫಿಯಾ ಸಂಬಂಧ ರಾಗಿಣಿ ಸ್ನೇಹಿತ ರವಿಶಂಕರ್‌ನನ್ನು ನಿನ್ನೆ ಬಂಧಿಸಿದ್ದ ಪೊಲೀಸರು, ಇಂದು ಬೆಳಗ್ಗೆಯೇ ಯಲಹಂಕದ ಜುಡಿಷಿನಲ್ ಲೇಔಟ್ ನಲ್ಲಿರೋ ರಾಗಿಣಿಯವರ ಅಪಾರ್ಟೆಂಟ್ ನಲ್ಲಿ ಶೋಧಕಾರ್ಯ ಶುರುಮಾಡಿದ್ದಾರೆ. ಸರ್ಚ್ ವಾರೆಂಟ್‌ನೊಂದಿಗೆ ತೆರಳಿರುವ ಸಿಸಿಬಿ ಪೊಲೀಸರು ರಾಗಿಣಿ ಮನೆಯಲ್ಲೇ ಇದ್ದು , ಶೋಧ ಕಾರ್ಯಕ್ಕೆ ಸಹಕಾರ ನೀಡುತ್ತಿರುವುದಾಗಿ ಮೂಲಗಳು ತಿಳಿಸಿವೆ. ರಾಗಿಣಿಯ ಆಪ್ತ ರವಿಶಂಕರ್ ಬಂಧನದ ಬೆನ್ನಿಗೆ ನಟಿ ಸಂಜನಾ ಗುರ್ಲಾನಿ ಆಪ್ತ ರಾಹುಲ್ ಮತ್ತು ಕಾರ್ತಿಕ್ ರನ್ನು ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಅವರಿಂದಲೂ ಮಾಹಿತಿ, ಸಾಕ್ಷ್ಯಗಳನ್ನು ಕಲೆಹಾಕಿರುವ ಪೊಲೀಸರು ಬೆಳಗ್ಗೆಯೇ ರಾಗಿಣಿ ಮನೆಯಿಂದಲೇ ಸರ್ಚ್ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

promotions

promotions

Read More Articles