ಟೆರಿರಿಸ್ಟಕ್ಕಿಂತಲೂ ಡ್ರಗ್ ಅತಿಹೆಚ್ಚು ಅಪಾಯಕಾರಿಯಾಗಿದೆ: ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ ಜಾರಕಿಹೊಳಿ
- 14 Jan 2024 , 9:29 PM
- Belagavi
- 166
ಹುಕ್ಕೇರಿ: ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಡ್ರಗ್ ಮಾಫಿಯಾ ದೊಡ್ಡ ಪ್ರಮಾಣದಲ್ಲಿ ಬೆಳೆಯುವದಕ್ಕೆ ಇಂದಿನ ಸರ್ಕಾರ ಮಾತ್ರವಲ್ಲದೇ ಈ ಹಿಂದಿನ ಸರ್ಕಾರಗಳು ಡ್ರಗ್ಸ್ ದಂಧೆಗೆ ಪುಷ್ಠಿ ನೀಡಿವೆ, ಮೆಡಿಕಲ್ ಕಾಲೇಜುಗಳ ಮತ್ತು ಇಂಜನೀಯರ ಕಾಲೇಜುಗಳ ವಿದ್ಯಾರ್ಥಿಗಳು ಡ್ರಗ್‍ಗೆ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಸಂಜನಾ ಜೊತೆ ಜಮೀರ ಅಹ್ಮದ ವಿಚಾರವಾಗಿ ಜಮೀರ ಜೊತೆ ಒಡಾಡಿದಕ್ಕೆ ಸಂಬಂದ ಕಲ್ಪಿಸಲು ಆಗುವದಿಲ್ಲ. ಪೋಲೀಸರು ಇದನ್ನು ತನಿಖೆ ಮಾಡಬೇಕು. ಮತ್ತು ಡ್ರಗ ಎನ್ನುವುದು ಟೆರಿರಿಸ್ಟಕ್ಕಿಂತಲೂ ಅತಿ ಹೆಚ್ಚು ಅಪಾಯಕಾರಿಯಾಗಿದೆ ಡ್ರಗ್ ಸಮಾಜವನ್ನು ಹಂತ ಹಂತವಾಗಿ ಬಲಿ ತೆಗೆದುಕೊಳ್ಳುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದರು.












