ನಿಗದಿತ ಸ್ಥಳದಲ್ಲಿ ವಾರದ ಸಂತೆ

  • 15 Jan 2024 , 3:01 AM
  • Haveri
  • 101

ಬಂಕಾಪುರ: ಪಟ್ಟಣದಲ್ಲಿ ಪ್ರತಿ ಮಂಗಳವಾರದ ನಡೆಯುತ್ತಿದ್ದ ಸಂತೆಯನ್ನು ಹಿಂದಿನಿಂದಲೂ ನಡೆಸಿಕೊಂಡು ಬಂದತ ನಿಗದಿತ ಸ್ಥಳದಲ್ಲಿಯೇ ನಡೆಸಬೇಕೇಂದು ವ್ಯಾಪಾರಸ್ತರು ಪುರಸಭೆ ಅಧಿಕಾರಿಗಳಿಗೆ ಹಾಗು ಪೊಲೀಸ್ ಇಲಾಖೆಗೆ ಸೋಮವಾರ ಮನವಿ ನೀಡಿದ ಹಿನ್ನಲೆಯಲ್ಲಿ ಮಂಗಳವಾರ ಸಂತೆಗೆ ಆಗಮಿಸಿದ ವ್ಯಾಪಾರಸ್ತರಿಗೆ ಪಿ.ಎಸ್.ಐ. ಸಂತೋಷಗೌಡ ಪಾಟೀಲ ಕೋವಿಡ್-19 ನಿಯಮದ ಪ್ರಕಾರ ಇರುವಂತೆ ಸೂಚಿಸಿದರು. ಸುಮಾರು ನಾಲ್ಕೈದು ತಿಂಗಳುಗಳಿಂದ ವಾರದ ಸಂತೆ ರದ್ದಾದ ಹಿನ್ನಲೆಯಲ್ಲಿ ಕಂಗಾಲಾಗಿದ್ದ ವ್ಯಾಪಾರಸ್ತರು, ನಿಗದಿತ ಸ್ಥಳದಲ್ಲಿ ವಾರದ ಸಂತೆ ನಡೆಸುವಂತೆ ಮನವಿ ನೀಡಿದ ವರದಿ ಪತ್ರಿಕೆಯಲ್ಲಿ ಪ್ರಕಟವಾಗಿರುವುದನ್ನು ಗಮನಿಸಿ ಸಾವಿರಾರು ವ್ಯಾಪಾರಸ್ತರು ಅಂಗಡಿ, ಮುಗ್ಗಟ್ಟುಗಳನ್ನು ಹೊಡೆಯಲು ಪಟ್ಟಣಕ್ಕೆ ಬಂದಿದ್ದರು.

promotions

ಇದರಿಂದ ಅಂಗಡಿಗಳನ್ನು ಹಚ್ಚುವುದರ ಬಗ್ಗೆ ವ್ಯಾಪಾರಸ್ತರಲ್ಲಿ ಗೋಂದಲಮಯ ವಾತಾವರಣ ಉಂಟಾಗಿತ್ತು. ಇದನ್ನರಿತ ಪುರಸಭೆ ಅಧಿಕಾರಿಗಳು ಹಾಗು ಪೊಲೀಸ್ ಇಲಾಖೆ ಕಾರ್ಯಪ್ರವೃತ್ತರಾಗಿ ಕೋವಿಡ್-19 ನಿಯಮದ ಪ್ರಕಾರ ಒಂದು ಅಂಗಡಿಯಿಂದ ಮತ್ತೊಂದು ಅಂಗಡಿ ಹಚ್ಚಲು ಸುರಕ್ಷಿತ ಅಂತರದಲ್ಲಿ ನಂಬರಗಳನ್ನು ಹಾಕಿ ವ್ಯಾಪಾರಸ್ತರಿಗೆ ಅನಕೂಲ ಮಾಡಿ ಕೊಡಲಾಯಿತು. ಈ ಸಂದರ್ಭದಲ್ಲಿ ರಮೇಶ ಶೆಟ್ಟರ, ಗಂಗಾಧರ ಮಾಮ್ಲೇಪಟ್ಟಣಶೆಟ್ಟರ, ಮಂಜುನಾಥ ಕೂಲಿ, ಮೋಹನ ಮಂಗಳಾರತಿ, ಅಶೋಕ ಗುಡಿಮನಿ, ಪ್ರಲ್ಹಾದ ರಾಯ್ಕರ, ಚನ್ನವೀರಯ್ಯ ಕರಿಮಳಮಠ, ಅಶೋಕ ಗೋತಗೇರಿ, ಮುಖೇಶ ಜೈನ್, ನಿಂಗಪ್ಪ ದೊಡ್ಡಮನಿ, ಸುರೇಶ ಶೆಟ್ಟರ, ಕಿರಣ ಜೈನ್ ಸೇರಿದಂತೆ ಪುರಸಭೆ ಅಧಿಕಾರಿಗಳು, ಪೊಲೀಸರು ಉಪಸ್ಥಿತರಿದ್ದರು.

promotions

Read More Articles