ಡ್ರಗ್ಸ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ! ತಾರ ದಂಪತಿಗೆ ಸಿಸಿಬಿ ನೋಟೀಸ್

<p>
<strong>ಬೆಂಗಳೂರು</strong> : ಚಂದನವನದ ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿರುವ ಹಿನ್ನಲೆ ತನಿಖೆ ಇನ್ನಷ್ಟು ಚುರುಕಾಗುತ್ತಿದೆ. ಸಿಸಿಬಿ ಪೊಲೀಸರು ಸ್ಯಾಂಡಲ್ ವುಡ್ ತಾರಾ ದಂಪತಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದೆ . ಹೌದು, ನಟ ದಿಗಂತ್ ಹಾಗೂ ಅವರ ಪತ್ನಿ ಐಂದ್ರಿತಾ ರೈ ಅವರಿಗೆ ನೋಟೀಸ್ ನೀಡಲಾಗಿದೆ ಎನ್ನಲಾಗಿದ್ದು , ಇಂದು 11 ಗಂಟೆಗೆ ಹಾಜರ್ ಆಗುವಂತೆ ಸಮನ್ಸ್ ಕಳುಹಿಸಲಾಗಿತ್ತು. ಐಂದ್ರಿತಾ ರೈ , ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ಶೇಖ್ ಫಾಜಿಲ್ ಶ್ರೀಲಂಕಾದಲ್ಲಿ ನಡೆಸುತ್ತಿದ್ದ ಕ್ಯಾಸಿನೋಗೆ ಭೇಟಿ ನೀಡಿದ್ದರೆನ್ನಲಾದ ವಿಡಿಯೋ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು , ಇದರ ಮಧ್ಯೆ ದಿಗಂತ್ ಹಾಗೂ ಐಂದ್ರಿತಾಗೆ ಈಗ ಸಿಸಿಬಿ ನೋಟೀಸ್ ತಲುಪಿದೆ ಎನ್ನಲಾಗಿದೆ. ಅವರು ಬಂದ ನಂತರ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು&#39; ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದರು.
</p>

promotions

Read More Articles