ಪ್ರೀತಿಸಿ ಮೋಸ ಹೋದ ಸ್ಯಾಂಡಲವುಡ್ ನಟಿ ಆತ್ಮಹತ್ಯೆಗೆ ಶರಣು

ಬೆಂಗಳೂರು: ಪ್ರೀತಿಸಿ ಮೋಸ ಹೋದ ಕಾರಣ ಸ್ಯಾಂಡಲವುಡ್ ನಟಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಳೆದ ಸುಮಾರು ಐದು ವರ್ಷದಿಂದ ಚಂದನಾ ಹಾಗೂ ದಿನೇಶ ಪ್ರೀತಿಸುತ್ತಿದ್ದರು ಆದರೆ ಇತ್ತೀಚೆಗೆ ಮದುವೆಯಾಗುವಂತೆ ದಿನೇಶ್​ಗೆ ಚಂದನಾ ಒತ್ತಾಯ ಮಾಡಿದ್ದರು. ಸದ್ಯ ಲಾಕ್​ ಡೌನ್​ ಇದೆ ಹೀಗಾಗಿ ಲಾಕ್ಡೌನ್​ ಪೂರ್ಣಗೊಂಡ ನಂತರ ಮದುವೆಯಾಗುವುದಾಗಿ ದಿನೇಶ್​ ಚಂದನಾಗೆ ಭರವಸೆ ನೀಡಿದ್ದ. ಮದುವೆ ಆಗುವುದಾಗಿ ನಂಬಿಸಿ ಚಂದನಾ ಜೊತೆ ಈತ ಅನೇಕ ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ. ಹಣವನ್ನು ಕೂಡಾ ಪಡೆದಿದ್ದ ದಿನೇಶ್ ನಂತರ ಉಲ್ಟಾ ಹೊಡೆದು ದಿನೇಶ್​ ಮದುವೆಯಾಗಲು ನಿರಾಕರಿಸಿದ್ದ ಕಾರಣ ನಟಿ ಚಂದನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

promotions

Read More Articles