ಮಹರ್ಷಿ ವಾಲ್ಮೀಕಿ ಹಾಗೂ ನಟ ಸುದೀಪ ಅವರನ್ನು ಅಶಿಲ್ಲವಾಗಿ ಚಿತ್ರಿಸಿದ ನಾಡ ದ್ರೋಹಿಗಳನ್ನು ಬಂದಿಸುವಂತೆ ಆಗ್ರಹ

ಬೆಳಗಾವಿ: ಹಿಂದೂ ಧರ್ಮದ ಶ್ರೇಷ್ಠ ಗ್ರಂಥ ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿಯವರನ್ನು ಮತ್ತು ಚಿತ್ರನಟ ಸುದೀಪ್ ಅವರನ್ನು ಬಾಗಲಕೋಟ ಜಿಲ್ಲೆಯಲ್ಲಿ ಅಶಿಲ್ಲವಾಗಿ ಚಿತ್ರಿಸಿದ ನಾಡ ದ್ರೋಹಿಗಳನ್ನು ಬಂದಿಸಬೇಕು ಎಂದು ಬೆಳಗಾವಿ ಕಮಿಷನರ್ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಸಿಸಿಬಿ ಕ್ರೈಂ ಅವರಿಗೆ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕದಿಂದ ಮನವಿ ಮಾಡಲಾಯಿತು.

promotions

ಹಿಂದೂ ಧರ್ಮದ ಶ್ರೇಷ್ಠ ಗ್ರಂಥ ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿಯವರನ್ನು ಮತ್ತು ಚಿತ್ರನಟ ಸುದೀಪ್ ಅವರನ್ನು ಅಶಿಲ್ಲವಾಗಿ ಚಿತ್ರಿಕರಿಸಿದ ನಾಡ ದ್ರೋಹಿಗಳನ್ನು ಬಂದಿಸಬೇಕು. ವಾಟ್ಸಪ್ ಗ್ರೂಪನಲ್ಲಿ ಡಿಪಿ ಇಟ್ಟು ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

promotions

ಅಷ್ಟೇ ಅಲ್ಲದೆ ಇದರ ಲಿಂಕನ್ನು ಸಹ ಬೇರೆ ಬೇರೆ ಕಡೆ ಹಾಕಿದ್ದಾರೆ. ಆದ್ದರಿಂದ ಸದರಿ ಆರೋಪಿಗಳು ಯಾರು ಎಂಬ ಕುರಿತು ಪತ್ತೆ ಮಾಡಿ ಬಂಧಿಸಬೇಕು ಮತ್ತು ಅವರ ಮೇಲೆ ಕಠಿಣ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ ದ ಅಧ್ಯಕ್ಷ ಮಹೇಶ್ ಶೀಗಿಹಳ್ಳಿ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಸವರಾಜ್ ನಾಯಿಕ, ವಿಜಯ್ ಹಗೇದಾಳ, ಆಕಾಶ್ ಸರಿಕಾರ, ಪರಶು ಹಣಗಿ, ಗಣೇಶ ನಿಂಗರಾಣಿ, ಸಚಿನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read More Articles