LKG-UKG ಪ್ರಾಥಮಿಕ ಹಂತದಿಂದ ಕೈ ಬಿಡಿ : ಅಂಗನವಾಡಿ ಕಾರ್ಯಕರ್ತೆ ಸಂಘದಿಂದ ಪ್ರತಿಭಟನೆ

ಬೆಳಗಾವಿ : ಇಂಗ್ಲಿಷ್‌ ಶಾಲೆಗಳ ಹಾವಳಿ ತಪ್ಪಿಸಲು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ (LKG-UKG) ಅಂಗನವಾಡಿಗಳನ್ನು ಪ್ರಾಥಮಿಕ ಹಂತದಲ್ಲಿ ಪ್ರಾರಂಭಿಸಬೇಕೆನ್ನುವ ಸರ್ಕಾರದ ಚಿಂತನೆಯನ್ನು ವಿರೋಧಿಸಿ ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸಂಘದಿಂದ ಪ್ರತಿಭಟನೆ ನಡೆಸಿದರು. ಸುಮಾರು ವರ್ಷಗಳಿಂದ ಸೇವೆಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಪೂರೈಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾ ಸಂಘಟನಾ ಕಾರ್ಯದರ್ಶಿ ರಾಜ್ಯ ಸರ್ಕಾರ LKG-UKG ಗಳನ್ನೂ ಪ್ರಾಥಮಿಕ ಶಾಲೆಗಳಲ್ಲಿ ತೆರೆಯಬೇಕೆಂದು ಒಂದು ದೊಡ್ಡ ಹುನ್ನಾರ ನಡೆಸಿದ್ದು ಅದನ್ನು ನಾವು ಖಂಡಿಸುತ್ತೇವೆ.

promotions

ಈಗಾಗಲೇ ನಾವು ಸುಮಾರು ವರ್ಷಗಳಿಂದ ಸಾಕಷ್ಟು ಪ್ರಮಾಣದಲ್ಲಿ ಸೇವೆ ಸಲ್ಲಿಸಿದ್ದೇವೆ, ಕೋವಿಡ್ 19 ಸಂದರ್ಭದಲ್ಲಿಯೂ ಸಹ ನಿರಂತರ ಸೇವೆ ಮಾಡಿದ್ದೇವೆ. ನಮಗೆ ಜುಲೈನಿಂದ ಇಲ್ಲಿವರೆಗೂ ಸರಿಯಾಗಿ ಪೇಮೆಂಟ್ ಕೂಡ ಆಗಿಲ್ಲ ಹೀಗಾದರೆ ನಮ್ಮ ಬದುಕು ನಡೆಸುವುದಾದರೆ ಹೇಗೆ ? ಇವತ್ತಿನ ನಮ್ಮ ಶಾಂತ ರೀತಿಯ ಹೋರಾಟಕ್ಕೆ ಸ್ಪಂದಿಸಿ ಸರ್ಕಾರ ಈ ಚಿಂತನೆಯನ್ನು ಇಲ್ಲಿಗೆ ಕೈಬಿಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನು ದೊಡ್ಡಮಟ್ಟದ ಹೋರಾಟ ಮಾಡಲು ನಾವು ಸಿದ್ಧ ಎಂದು ಆಕ್ರೋಶ ಹೊರಹಾಕಿದರು. ಈ ಸಂದರ್ಭದಲ್ಲಿ ಜಿಲ್ಲಾ ಅದ್ಯಕ್ಷ ನಾಗೇಶ್ ಎನ್ ಸಾತೇರಿ, ವಾಯ್.ಬಿ.ಶಿಗಿಹಳ್ಳಿ, ಮೀನಾಕ್ಷಿ ಕೋಟಗಿ, ಸುಜಾತ ಬೆಳಗಾವಕರ ಹಾಗೂ ಇನ್ನಿತರ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

promotions

Read More Articles