ಸೊಳ್ಳೆ ಕಾಯಿಲೆಯ ಹೋಗೆ ಸೇವಿಸಿ ಒಂದೇ ಕುಟುಂಬದ 6 ಮಂದಿ ಸಾವು
- Krishna Shinde
- 14 Jan 2024 , 10:13 PM
- Delhi
- 598
ದೆಹಲಿ :ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ಒಂದೇ ಕುಟುಂಬದ ಆರು ಜನರು ಮನೆಯಲ್ಲಿ ಮಲಗಿದ್ದಾಗ ಸೊಳ್ಳೆ ನಿವಾರಕ ರಾತ್ರಿಯಿಡೀ ಸುಟ್ಟ ಪರಿಣಾಮವಾಗಿ ಉತ್ಪತ್ತಿಯಾದ ಕಾರ್ಬನ್ ಮಾನಾಕ್ಸೈಡ್ ಉಸಿರಾಡಿದ ಕಾರಣ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ರಾತ್ರಿ ಹೊತ್ತಿನಲ್ಲಿ ಉರಿಯುತ್ತಿದ್ದ ಸೊಳ್ಳೆ ಕಾಯಿಲ್ ಹಾಸಿಗೆಯ ಮೇಲೆ ಬಿದ್ದ ಕಾರಣ ಬೆಂಕಿ ಹತ್ತಿಕೊಂಡಿದ್ದು ಉಂಟಾದ ವಿಷಕಾರಿ ಹೊಗೆಯಿಂದ ಮನೆಯ ನಿವಾಸಿಗಳು ಪ್ರಜ್ಞೆ ಕಳೆದುಕೊಂಡಿದ್ದಾರೆ ಮತ್ತು ನಂತರ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ನಡೆದಾಗ ಮನೆಯಲ್ಲಿ ಒಂಬತ್ತು ಮಂದಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರು ಮಂದಿ ಮೃತಪಟ್ಟಿದ್ದಾರೆ ಮತ್ತು ಇನ್ನಿಬ್ಬರು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.










