ಖ್ಯಾತ ನಿರೂಪಕಿ ಅನುಶ್ರೀಗೆ ಸಿಸಿಬಿ ಸಮನ್ಸ್ ಜಾರಿ

ಬೆಂಗಳೂರು : ಡ್ರಗ್ ಕೇಸ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ನಿತ್ಯ ಒಬ್ಬಬರ ಹೊಸ - ಹೊಸ ಹೆಸರುಗಳು ಕೇಳಿಬರುತ್ತಿವೆ. ಇಂದು ವಾಟ್ಸ್ ಆ್ಯಪ್ ಮೂಲಕ ಖ್ಯಾತ ನಿರೂಪಕಿ ಅನುಶ್ರೀಗೆ ಸಿಸಿಬಿ ಸಮನ್ಸ್ ಜಾರಿ ಮಾಡಿದೆ. ವಾಟ್ಸ್ಆಯಪ್ ಮೂಲಕ ನೋಟಿಸ್ ಜಾರಿ ಮಾಡಿರುವ ಸಿಸಿಬಿ , ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಡ್ಯಾನ್ಸರ್ ಕಿಶೋರ್ ಶೆಟ್ಟಿ ಆಪ್ತ ತರುಣ್ ನೀಡಿದಂತ ಮಾಹಿತಿಯನ್ನು ಆಧರಿಸಿ, ಮಂಗಳೂರಿನ ಸಿಸಿಬಿ ಪೊಲೀಸರು ಖ್ಯಾತ ನಿರೂಪಕಿ ಅನುಶ್ರೀಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

promotions

promotions

Read More Articles